ದಾವಣಗೆರೆ: ಜಗಳೂರಿನಲ್ಲಿರುವ ಅಲ್ಪಸಂಖ್ಯಾತ ಶಾಲೆಯ 95 ಮಕ್ಕಳು ಅಸ್ವಸ್ಥರಾಗಿದ್ದಾರೆ. ಈ ಮಕ್ಕಳು ರಾತ್ರಿ ಅನ್ನ ಸಾಂಬಾರ್, ಬೆಳಗ್ಗೆ ಚಿತ್ರಾನ್ನ ತಿಂದಿದ್ದರು ಎನ್ನಲಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಸ್ವಸ್ಥಗೊಂಡ 50 ವಿದ್ಯಾರ್ಥಿಗಳಿಗೆ ಜಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಇನ್ನುಳಿದ 45 ವಿದ್ಯಾರ್ಥಿಗಳಿಗೆ ವಸತಿ ಶಾಲೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ವಸತಿ ಶಾಲೆಗೆ ತಹಶೀಲ್ದಾರ್, ಟಿಎಚ್ಓ, ಮಕ್ಕಳ ತಜ್ಞರು ಭೇಟಿ ನೀಡಿದ್ದಾರೆ.
ಬೆಳಗ್ಗೆ ತಿಂಡಿ ಸೇವಿಸಿದ ಬಳಿಕ ಮಕ್ಕಳೆಲ್ಲಾ ಅಸ್ವಸ್ಥರಾಗಿದ್ದಾರೆ. ಮಕ್ಕಳು ಹೀಗೆ ಅಸ್ವಸ್ಥರಾಗಲು ಕಾರಣ ಏನು ಎಂಬುದು ಇನ್ನು ತಿಳಿದಿಲ್ಲ. ಮಕ್ಕಳಿಗೆ ಚಿಕಿತ್ಸೆ ಮುಂದುವರೆದಿದೆ.