ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಚಿತ್ರದುರ್ಗ, (ನ.30): ಚಿತ್ರಡಾನ್‍ಬೋಸ್ಕೋ ಸಂಸ್ಥೆ ವತಿಯಿಂದ ಸಂಜೆ ಶಾಲೆ ಮಕ್ಕಳು ಮತ್ತು ಮಕ್ಕಳ ಹಕ್ಕುಗಳ ಕ್ಲಬ್ ಮಕ್ಕಳಿಗೆ ಮಕ್ಕಳ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
ಡಾನ್‍ಬೋಸ್ಕೋ ಸಂಸ್ಥೆ ನಿರ್ದೇಶಕ ಫಾದರ್ ಸಜ್ಜಿಜಾರ್ಜ್ ಮಾತನಾಡಿ ಜವಾಹರಲಾಲ್ ನೆಹರುರವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಏಕೆಂದರೆ ನೆಹರುರವರಿಗೆ ಮಕ್ಕಳೆಂದರೆ ಅಚ್ಚುಮೆಚ್ಚು. ಅದಕ್ಕಾಗಿ ಮಕ್ಕಳು ಸದಾ ಖುಷಿಯಿಂದ ಇರಬೇಕೆನ್ನುವ ಕಾರಣಕ್ಕಾಗಿ ಪ್ರತಿ ವರ್ಷವೂ ಮಕ್ಕಳ ದಿನಾಚರಣೆಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಶಿಕ್ಷಣದ ಜೊತೆ ಮಕ್ಕಳು ಆಟಗಳಲ್ಲಿಯೂ ಭಾಗವಹಿಸಿ ಬಹುಮಾನಗಳನ್ನು ಗೆಲ್ಲಬೇಕು ಎಂದು ತಿಳಿಸಿದರು.
ಆಂಗ್ಲ ಮಾಧ್ಯಮ ಡಾನ್‍ಬೋಸ್ಕೋ ಸಂಸ್ಥೆಯ ಪ್ರಾಂಶುಪಾಲರಾದ ಫಾದರ್ ಲಾರೆನ್ಸ್, ಪರಿಸರ ತಜ್ಞ ಎಸ್.ಕೆ.ಹೆಚ್.ಸ್ವಾಮಿ, ದಂತ ವೈದ್ಯೆ ನಾಗಮಣಿ ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಮಕ್ಕಳಿಗೆ ವಿವಿಧ ಆಟದ ಸ್ಟಾಲ್‍ಗಳನ್ನು ತೆರೆಯಲಾಗಿತ್ತು.
ನೃತ್ಯ ಮತ್ತು ಜನಪದ ಗೀತೆಗಳ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ನೀಡಲಾಯಿತು.