ಚಿತ್ರದುರ್ಗ, (ಜ.04) : ಮಕ್ಕಳು ಚೆನ್ನಾಗಿ ವಿಧ್ಯಾಭ್ಯಾಸ ಮಾಡಬೇಕು.ತಂದೆ ತಾಯಿ ಕಷ್ಟಪಟ್ಟು ಜೀವನ ಸಾಗಿಸಿ ನಿಮ್ಮನ್ನು ಓದಿಸುತ್ತಿದ್ದಾರೆ. ನೀವು ಚೆನ್ನಾಗಿ ಓದಿ ವಿದ್ಯಾವಂತರಾಗಿ ಅವರನ್ನು ಚೆನ್ನಾಗಿ ನೊಡಿಕೋಳ್ಳಬೇಕೆಂದು ಜಿ.ಎಸ್.ಅನಿತ್‍ಕುಮಾರ್ ಹೇಳಿದರು.
ತಾಲ್ಲೂಕಿನ ಭೀಮಸಮುದ್ರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಲ್ಲಿಕಾರ್ಜುಪ್ಪ ಶ್ರೀಮತಿ ಹಾಲಮ್ಮ ಚಾರಿಟಿ ಫೌಂಡೇಶನ್ (ರಿ) ವತಿಯಿಂದ ಜಿ.ಎಸ್. ಜಿ.ಎಸ್.ಅನಿತ್‍ಕುಮಾರ್ ಅವರು ಶಾಲಾ ಮಕ್ಕಳಿಗೆ ನೋಟ್ ಬುಕ್ ಮತ್ತು ಶಾಲಾ ಬ್ಯಾಗ್ ವಿತರಣೆ ಮಾಡಿ ಮಕ್ಕಳಿಗೆ ಕಿವಿಮಾತು ಹೇಳಿದರು.
ಹಾಗೆಯೆ ಮಕ್ಕಳಿಗೆ ನೀವು ಮುಂದೆ ಜೀವನದಲ್ಲಿ ಏನಾಗಬೇಕೆಂದು ಬಯಸುತ್ತೀರ ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಮಕ್ಕಳು ಡಾಕ್ಟರ್, ಪೋಲಿಸ್, ಇಂಜಿನಿಯರ್ ಮತ್ತು ದೇಶದ ಸೈನಿಕರು ಅಗುತ್ತೇವೆಂದು ಮಕ್ಕಳು ಹೇಳಿದರು.
ನೀವು ಶ್ರಮಪಟ್ಟು ಓದಿದರೆ ಕಂಡ ಕನಸು ನನಸಾಗುತ್ತದೆ. ನಿಮ್ಮ ಜೀವನ ಉತ್ತಮವಾಗಿರುತ್ತದೆ ಎಂದು ತಿಳಿಸಿದರು.
ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರು ಸರಿಯಾದ ಬೋಧನೆ ನೀಡಿದರೆ ಮಕ್ಕಳು ಉತ್ತಮ ಪ್ರಜೆಗಳಾಗುತ್ತಾರೆ. ನಮ್ಮ ದೇಶದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರಂತೆ ಆಗುತ್ತೀರೆಂದು ತಿಳಿಸಿದರು.
ಶಾಲಾ ಶಿಕ್ಷಕಿ ಸುಂದರಮ್ಮ ಮಾತನಾಡಿ, ಜಿ.ಎಸ್ ಅನಿತ್‍ಕುಮಾರ್ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಬುಕ್ ಹಾಗು ಶಾಲಾ ಬ್ಯಾಗ್ ವಿತರಣೆ ಮಾಡುತ್ತಿರುವುದು ಸಂತೋಷದ ವಿಷಯ ನಮ್ಮ ಶಾಲಾ ಮಕ್ಕಳ ಜೊತೆ ಮಾತನಾಡಿ ಮಕ್ಕಳಿಗೆ ಉತ್ತೇಜನ ತುಂಬಿದರು. ಮತ್ತು ಶಾಲಾ ಮಕ್ಕಳು ಭವಿಷ್ಯದಲ್ಲಿ ಏನಾಗಬೇಕೆಂದು ತಿಳಿಸುವ ಪ್ರಯತ್ನ ಮಾಡಿಸಿದರು. ಅವರಿಗೆ ನಮ್ಮ ಶಿಕ್ಷಕರ ಪರವಾಗಿ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ಜಿ.ಎಸ್ ಅನಿತ್‍ಕುಮಾರ್ ಅವರನು ಶಿಕ್ಷಕರು ಹಾಗು ಗ್ರಾಮಸ್ಥರು ಸನ್ಮಾನಮಾಡಿದರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷ ಎಂ ಸಂತೋಷ್ ಕುಮಾರ್ ವಹಿಸಿಕೊಂಡಿದ್ದರು, ಮುಖ್ಯ ಆಥಿತಿಗಳಾಗಿ ಯುವಮುಖಂಡ ಜಿ.ಎಸ್. ಅನಿತ್‍ಕುಮಾರ್. ಗ್ರಾ.ಪಂ ಅಧ್ಯಕ್ಷೆ ಕಾವ್ಯ, ಗ್ರಾ.ಪಂ ಸದಸ್ಯ ಟಿ.ಜಿ.ಅಶೋಕ್, ಮುಖ್ಯ ಶಿಕ್ಷಕಿ ಪಾರ್ವತಿಬಾಯಿ ಆರ್, ಮಾಜಿ ತಾ.ಪಂ ಸದಸ್ಯ ಟಿ.ಪಿ. ಚಂದ್ರನಾಯ್ಕ ಗ್ರಾಮಸ್ಥರಾದ ತಿಪ್ಪೇಶ್ ನಾಯ್ಕ. ಲೋಕನಾಯ್ಕ. ಮಧು ಕುಮಾರ್. ಶಿಕ್ಷಕರಾದ ಮಂಜುಳಮ್ಮ . ಧನಂಜಯಪ್ಪ. ಮತ್ತು ಗ್ರಾಮಸ್ಥರು ಮಕ್ಕಳು ಉಪಸ್ಥಿತರಿದ್ದರು.