ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಮಾರ್ಚ್. 10 : ಶಿಕ್ಷಣದ ಜೊತೆ ಆಟ ಹಾಗೂ ಇನ್ನಿತರೆ ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸುವಂತೆ ಪಾರ್ಶ್ವನಾಥ ಶಾಲಾ ಸಮಿತಿ ಸದಸ್ಯ ಗೀಸುಲಾಲ್ ಮಕ್ಕಳಿಗೆ ಕರೆ ನೀಡಿದರು.

ಶಾಲೆಯಲ್ಲಿ ಶಾರದ ಪೂಜೆಯಲ್ಲಿ ಭಾಗವಹಿಸಿದ ಅವರು ಪ್ರೈಮರಿಯಿಂದ ಒಂಬತ್ತನೆ ತರಗತಿ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಶಾಲಾ ಸಮಿತಿ ಸದಸ್ಯ ಪುಕ್‍ರಾಜ್‍ಜೈನ್, ಉಪಾಧ್ಯಕ್ಷ ಉತ್ತಮ್‍ಚಂದ್ ಸುರಾನ, ಕಾರ್ಯದರ್ಶಿ ಸುರೇಶ್‍ಕುಮಾರ್, ನಿರ್ದೇಶಕರುಗಳಾದ ಜವೇರಿಲಾಲ್ ಮಹಾವೀರ್
ಮುಖೇಶ್‍ಜೈನ್ ಇವರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಕ್ರೀಡೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

