ಮಕ್ಕಳು ವೃತ್ತಿ ಕೌಶಲ್ಯ ಮತ್ತು ಸ್ಕಿಲ್ ಡೆವಲಪ್ಮೆಂಟ್ ಬೆಳೆಸಿಕೊಳ್ಳಬೇಕು : ನವೀನ್.ಕೆ.ಎಸ್

2 Min Read

 

 

ಚಿತ್ರದುರ್ಗ :  ನಗರದ ವಿದ್ಯಾ ವಿಕಾಸ ವಿದ್ಯಾ ಸಂಸ್ಥೆಯಲ್ಲಿ ಎ.ಟಿ.ಎಲ್ ಕಮ್ಯುನಿಟಿ ಡೇ ಹಾಗೂ ಕಾರ್ಯಾಗಾರ (ATL Community Day And Work Shop)ದ ಉದ್ಘಾಟನಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು, ಇದರಲ್ಲಿ ಚಿತ್ರದುರ್ಗದಲ್ಲಿನ 5 ಸರ್ಕಾರಿ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿ ಅಟಲ್ ಟಿಂಕರಿಂಗ್ ಲ್ಯಾಬ್‍ನ ತರಬೇತಿ ಪಡೆದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ವಿಧಾನ ಪರಿಷತ್ ಸದಸ್ಯರಾದ ನವೀನ್.ಕೆ.ಎಸ್. ಅವರು ಭಾಗವಹಿಸಿ ವಿದ್ಯಾರ್ಥಿಗಳಲ್ಲಿ ಅತ್ಮ ವಿಶ್ವಾಸ ಮೂಡಿಸುವಂತಹ ಮಾತುಗಳನ್ನು ಆಡಿದರು. ಹಾಗೂ ನಮ್ಮ ಚಿತ್ರದುರ್ಗ ಜಿಲ್ಲೆಯಲ್ಲಿರುವ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ವಿದ್ಯಾ ವಿಕಾಸ ಶಾಲೆಯು ಮಕ್ಕಳ ಕಲಿಕೆ ಅನುಕೂಲವಾಗುವಂತಹ ಸುಜ್ಜಿತ ಸೌಲಭ್ಯಗಳನ್ನು ಹೊಂದಿದ್ದು, ಉತ್ತಮ ಶಿಕ್ಷಣ ನೀಡುತ್ತಾ ಬಂದಿದೆ.

ಇಂತಹ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.  ಹಾಗೆಯೇ ವಿಜ್ಞಾನ ಮತ್ತು ತಂತ್ರಾಜ್ಞಾನ ಕುರಿತು ಮಕ್ಕಳಿಗೆ ಹಲವಾರು ಉದಾಹರಣೆಗಳನ್ನು ನೀಡುತ್ತಾ ಮನ ಮುಟ್ಟುವಂತೆ ಮಾತನಾಡಿದರು. ಅಟಲ್ ಟಿಂಕರಿಂಗ್ ಲ್ಯಾಬ್‍ನ್ನು ವೀಕ್ಷಣೆ ಮಾಡಿ ನಂತರ ವಿದ್ಯಾರ್ಥಿಗಳು ತಯಾರಿಸಿದ ರೋಬೋಟಿಕ್ ಪ್ರಾಜೆಕ್ಟ್‍ಗಳನ್ನು  ಕೂಲಂಕುಶವಾಗಿ ವೀಕ್ಷಣೆ ಮಾಡಿ ನಂತರ ಮಕ್ಕಳೊಂದಿಗೆ ಸಂವಾದ ನಡೆಸಿದರು.

ಅಲ್ಲದೇ ಮಕ್ಕಳು ತಮ್ಮ ರಜಾ ದಿನಗಳನ್ನು ಹಲವು ಕಡೆ ಇಂಟರ್ನ್ ಶಿಫ್ ಮಾಡುವ ಮೂಲಕ ಕೇವಲ ಪುಸ್ತಕ  ಜ್ಞಾನ  ಪಡೆಯುವುದಕ್ಕಷ್ಟೇ ಸೀಮಿತವಾಗದೆ ಸಾಮಾಜದಲ್ಲಿನ ವೃತ್ತಿ ಕೌಶಲ್ಯ ಮತ್ತು ಸ್ಕಿಲ್ ಡೆವಲಪ್ಮೆಂಟ್ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ “ಕಿಡ್ವೆಂಟೋ ಎಜುಕೇಷನ್ ಅಂಡ್ ಪ್ರೈವೇಟ್ ರಿಸರ್ಚ್ ಸೆಂಟರ್‍ನ” ಸಂಸ್ಥಾಪಕರಾದ ಸುಮಂತ್ ಪ್ರಭು ಅವರು ಅಟಲ್ ಟಿಂಕರಿಂಗ್ ಲ್ಯಾಬ್‍ನ ಬಗ್ಗೆ ವಿವರ ನೀಡಿದರು.  ವಿದ್ಯಾರ್ಥಿಗಳು ಗೆಲುವನ್ನು ಬಯಸಬಾರದು, ಏಕೆಂದರೆ ವಿದ್ಯಾರ್ಥಿಗಳಲ್ಲಿ “ಸೋಲೇ ಗೆಲುವಿನ ಮೆಟ್ಟಿಲು”   ವಿದ್ಯಾರ್ಥಿಗಳು ಜೀವನದಲ್ಲಿ ಸೋಲಿನಿಂದ ಮರಳಿ ಯತ್ನವ ಮಾಡಬೇಕು ಆಗ ಯಾವಾಗಲೂ ಜಯ ಸಿಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಡಯಟ್‌ನ ಹಿರಿಯ ಉಪನ್ಯಾಸಕರಾದ ಸೈಯದ್ ಮೋಸಿನ್‍ರವರು  ಮಾತನಾಡುತ್ತಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್‍ಅನ್ನು ಬಳಸಿಕೊಂಡು ಹಲವಾರು ಅನ್ವೇಷಣೆಗಳನ್ನು ಮಾಡಿ ತಮ್ಮ ಜೀವನ ಉತ್ತಮ ಸಾಧನೆ ಮಾಡಲು ಸಲಹೆ ನೀಡಿದರು.

ಸಂಸ್ಥೆಯ ಕಾರ್ಯದರ್ಶಿಗಳಾದ  ಬಿ.ವಿಜಯ್ ಕುಮಾರ್ ಅವರು ಮಾತನಾಡುತ್ತಾ ವಿದ್ಯಾರ್ಥಿಳಿಗೆ “ಮಕ್ಕಳು ದೇಶದ ಭವಿಷ್ಯ” ಎಂದು ಹೇಳಿದರು.

ವಿದ್ಯಾರ್ಥಿಗಳು ಪಠ್ಯೇತರ  ಚಟುವಟಿಕೆಗಳಿಗೆ ಹೆಚ್ಚಿನ ಅಧ್ಯತೆ ಕೊಡಬೇಕು ಹಾಗೂ ಆ ಮೂಲಕ ಅದಷ್ಟೂ ರಜಾ ದಿನಗಳನ್ನು ವ್ಯರ್ತ ಮಾಡದೇ ಕಲಿಕೆಗೆ  ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಶ್ರೀ.ಎಸ್.ಎಂ ಪೃಥ್ವೀಶ್, ಸಂಸ್ಥೆಯ  ಅಕಾಡೆಮಿಕ್ ಅಡ್ಮಿನಿಸ್ಟ್ರೇಟರ್ ಡಾ|| ಸ್ವಾಮಿ ಕೆ.ಎನ್, ಮುಖ್ಯ ಶಿಕ್ಷಕರಾದ ಸಂಪತ್ ಕುಮಾರ್ ಸಿ.ಡಿ, ಐಸಿಎಸ್‍ಇ ಪ್ರಿನ್ಸಿಪಾಲರಾದ ಬಸವರಾಜಯ್ಯ.ಪಿ ಭಾಗವಾಹಿಸಿದ್ದರು.  ಕಾರ್ಯಕ್ರಮವನ್ನು ಶಿಕ್ಷಕಿ ಫರ್ಹಾ ಹಶ್ಮಿ ನಿರೂಪಿಸಿದರು, ಶಿಕ್ಷಕಿ ಭುವನ ಅವರು ಸ್ವಾಗತಿಸಿದರು, ಶಿಕ್ಷಕಿ ಮೇಘನ ಅವರು ವಂದಿಸಿದರು, ಹಾಗೂ ಎಲ್ಲಾ ಶಿಕ್ಷಕ/ಶಿಕ್ಷಕೇತರ  ವೃಂದ, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *