ಇಸ್ರೋಗೆ ಭೇಟಿ ನೀಡಿದ ಸ್ನೇಹ ಪಬ್ಲಿಕ್ ಶಾಲೆಯ ಮಕ್ಕಳು

1 Min Read

ಸುದ್ದಿಒನ್, ಚಳ್ಳಕೆರೆ, ನವೆಂಬರ್. 16 : ಹೊಳಲ್ಕೆರೆಯ ಸ್ನೇಹ ಪಬ್ಲಿಕ್ ಶಾಲೆಯ ಮಕ್ಕಳು ಇಂದು ಬೆಂಗಳೂರಿನಲ್ಲಿರುವ ಇಸ್ರೋ ಸಂಸ್ಥೆಗೆ ಭೇಟಿ ನೀಡಿದರು.

ಈ ವೇಳೆ ಶಾಲೆಯ ಅಧ್ಯಕ್ಷ ಜೆ ಎಸ್.ಮಂಜುನಾಥ್ ಮಾತನಾಡಿ, ಇಸ್ರೋ ಸಂಸ್ಥೆಯನ್ನು ಸ್ಥಾಪನೆ ಮಾಡಿದ ಯು.ಆರ್. ರಾವ್ ಉಪಗ್ರಹ ಕೇಂದ್ರ ನಮ್ಮ ಕರ್ನಾಟಕದಲ್ಲಿ ಸ್ಥಾಪನೆ ಮಾಡಿದ್ದು ನಮಗೆ ಹೆಮ್ಮೆಯ ವಿಷಯ. ನಮ್ಮ ಶಾಲೆಯ ಮಕ್ಕಳು ಇಸ್ರೋ ಸಂಸ್ಥೆಗೆ ಭೇಟಿ ನೀಡಿದ್ದು ಇಸ್ರೋ ಸಂಸ್ಥೆಗೆ ನಮ್ಮ ಶಾಲೆಯ ಪರವಾಗಿ ಕೃತಜ್ಞತೆಗಳು ಎಂದರು.

ಶಾಲೆಯ ಮುಖ್ಯ ಶಿಕ್ಷಕ ಜೆ.ಸಿ. ವೇಣುಗೋಪಾಲ್ ಮಾತನಾಡಿ, “ನಾವು ಇಸ್ರೋ ಸಂಸ್ಥೆಗೆ ಪ್ರವಾಸ ಬಂದಿದ್ದು, ನಿಜಕ್ಕೂ ಹೆಮ್ಮೆಯ ವಿಚಾರ. ಬೇರೆ ಯಾರಿಗೂ ದೊರೆಯದ ಅವಕಾಶ ನಮಗೆ ದೊರೆತಿದೆ. ಅಲ್ಲಿ ಕೃತಕ ಉಪಗ್ರಹಗಳನ್ನು ತಯಾರಿಸಿರುವ ಬಗ್ಗೆ ತಿಳಿದು ನೋಡಿ ತುಂಬಾ ಸಂತಸವಾಯಿತು. ಹಾಗೂ ಭವಿಷ್ಯದಲ್ಲಿ ಮಾನವ ಸಹಿತ ಉಪಗ್ರಹಗಳನ್ನು ಅಲ್ಲಿಯೇ ತಯಾರಿಸುತ್ತಿದ್ದದನ್ನು ಸಹಾ ನೋಡಿ ನಮಗೆ ಖಗೋಳ ವಿಜ್ಞಾನದ ಬಗ್ಗೆ ಆಸಕ್ತಿ, ಕುತೂಹಲ ಹೆಚ್ಚಾಯಿತು. ನಿಜಕ್ಕೂ ಒಂದು ದಿನದ ಇಸ್ರೋ ಪ್ರವಾಸ ಸಾರ್ಥಕವಾಯಿತು ಎಂದು ಹೇಳಿದರು.

ನಿವೃತ್ತ ಶಿಕ್ಷಕರಾದ ಹಾಗೂ ಹವ್ಯಾಸಿ ಖಗೋಳ ವೀಕ್ಷಕರಾದ ಹೆಚ್.ಎಸ್.ಟಿ. ಸ್ವಾಮಿ ಮಾತನಾಡಿ, ಹೊಳಲ್ಕೆರೆಯ ಸ್ನೇಹಾ ಪಬ್ಲಿಕ್ ಸ್ಕೂಲ್ ಮಕ್ಕಳ ಜೊತೆ, ಇಸ್ರೋ ಸಂಸ್ಥೆಗೆ ಭೇಟಿ ನೀಡಿದ್ದು, ನನಗೆ ತುಂಬಾ ಸಂತಸ ತಂದಿತ್ತು. ಆ ಮಕ್ಕಳು ಇಸ್ರೋದಲ್ಲಿ ಇಲ್ಲಿಯವರೆಗೆ ನಡೆದ ಮತ್ತು ಭವಿಷ್ಯದಲ್ಲಿ ನಡೆಯುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದರು. ವಿಜ್ಞಾನಿಗಳ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಿಜಕ್ಕೂ ಶ್ಲಾಘನೀಯ ವಿಷಯ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವಲ್ಲಿ ಪ್ರವಾಸ ಕಾರ್ಯಕ್ರಮ ಯಶಸ್ವಿಯಾಯಿತು ಎಂದು ತಿಳಿಸಲು ಹೆಮ್ಮೆ ಎನಿಸುತ್ತದೆ ತಿಳಿಸಿದರು.

ಸುಮಾರು 45 ಮಕ್ಕಳು ಹಾಗೂ ಶಿಕ್ಷಕರು ಶಾಲೆಯ ಸಿಬ್ಬಂದಿ ವರ್ಗದವರು ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಸಂತಸ ಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *