ಬೆಂಗಳೂರು: ಕೊರೊನಾ ಮೂರನೇ ಅಲೆಯ ಭಯ ಎಲ್ಲರನ್ನು ಕಾಡುತ್ತಿದೆ. ಇದರ ನಡುವೆ ಒಮಿಕ್ರಾನ್ ಪತ್ತೆಯಾಗಿದ್ದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಅದರಲ್ಲೂ ಪ್ರತಿದಿನ ವಿದ್ಯಾರ್ಥಿಗಳಲ್ಲೇ ಸೋಂಕು ಕಾಣಿಸಿಕೊಳ್ಳುತ್ತಿರುವುದು ಪೋಷಕರಿಗೂ ಗೊಂದಲ ಮೂಡಿಸಿದೆ. ಈ ಬೆನ್ನಲ್ಲೇ ಶಾಲೆ ಮತ್ತೆ ಕ್ಲೋಸ್ ಮಾಡ್ತಾರಾ ಎಂಬ ಅನುಮಾನ ಕಾಡುತ್ತಿದೆ.
ಶಾಲಾ ಮಕ್ಕಳ ಆರೋಗ್ಯದ ಬಗ್ಗೆ ಮಾತನಾಡಿರುವ ಸಚಿವ ಆರ್ ಅಶೋಕ್ ಶಾಲಾ ಮಕ್ಕಳ ಪೋಷಕರು ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಲೇಬೇಕು ಎಂದಿದ್ದಾರೆ. ಒಮಿಕ್ರಾನ್ ವೈರಸ್ ಇಡೀ ವಿಶ್ವದಲ್ಲಿ 400ಕ್ಕೂ ಕೇಸ್ ಗಳು ವರದಿಯಾಗಿವೆ. ಈ ರೋಗವೂ ಅಷ್ಟೊಂದು ತೀವ್ರವಾಗಿಲ್ಲ. ಆದರೂ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ ಎಂದಿದ್ದಾರೆ.
ಇನ್ಮೇಲೆ ಹೆಚ್ಚಿನ ಕಟ್ಟೆಚ್ಚರವಹಿಸಲಾಗುವುದು.ಇದು ಸಿನಿಮಾ ಹಾಲ್, ಮಾಲ್ ಎಲ್ಲೆ ಹೋಗಬೇಕೆಂದರೂ ಎರಡೂ ಡೋಸ್ ವ್ಯಾಕ್ಸಿನ್ ಹಾಕಿಸಿರಲೇಬೇಕು. ಮಕ್ಕಳನ್ನ ಶಾಲೆಗೆ ಕಳುಹಿಸುವ ಪೋಷಕರು ಕೂಡ ಎರಡು ಡೋಸ್ ವ್ಯಾಕ್ಸಿನ್ ಹಾಕಿಸಿರಲೇಬೇಕು ಎಂದಿದ್ದಾರೆ.