ಬೆಂಗಳೂರು: ನಿನ್ನೆಯಷ್ಟೇ ಸಿಲಿಕಾನ್ ಸಿಟಿಯಲ್ಲಿ ಮೂವರು ವಿದ್ಯಾರ್ಥಿಗಳ ನಾಪತ್ತೆ ಆತಂಕ ಮೂಡಿಸಿತ್ತು. ಸದ್ಯ ಮಕ್ಕಳೇನೋ ಸುರಕ್ಷಿತವಾಗಿ ಸಿಕ್ಕಿದ್ದಾರೆ. ಆದ್ರೆ ಅವ್ರ ಫ್ಲ್ಯಾನ್ ಕೇಳಿ ಪೊಲೀಸರೇ ಶಾಕ್ ಆಗಿದ್ದಂತು ನಿಜ.
ಹೌದು, ನಂದನ್, ಕಿರಣ್, ಪರೀಕ್ಷಿತ್ ಎಂಬ ಮೂವರು ವಿದ್ಯಾರ್ಥಿಗಳು ಕಬಡ್ಡಿ ಹಾಡಿ, ಹಣ ಮಾಡ್ಬೇಕು ಅಂತ ಆಸೆ ಇಟ್ಕೊಂಡು ಈ ಮೂವರು ವಿದ್ಯಾರ್ಥಿಗಳು ಬೆಂಗಳೂರು ಬಿಟ್ಟಿದ್ರಂತೆ. ಸದ್ಯಕ್ಕೆ ಉಪ್ಪಾರ ಪೇಟೆ ಪೊಲೀಸರು ಮಕ್ಕಳನ್ನು ರಕ್ಷಿಸಿ ಪೋಷಕರಿಗೆ ಒಪ್ಪಿಸಿದ್ದಾರೆ.
ಮೂವರು ವಿದ್ಯಾರ್ಥಿಗಳು ತಲಾ ಒಂದೊಂದು ಸಾವಿರ ತೆಗೆದುಕೊಂಡು ಮನೆಯಿಂದ ಹೊರಟಿದ್ದಾರೆ. ನಮಗೆ ಕಬಡ್ಡಿ ಆಟ ಅಂದ್ರೆ ಇಷ್ಟ ನೀವೂ ಓದು ಓದು ಅಂತೀರಾ. ನಾವೂ ಕಬಡ್ಡಿ ಆಡಿನೇ ಹಣ ಸಂಪಾದನೆ ಮಾಡ್ತೀವಿ ಅಂತ ಹೊರಟವರು, ನೇರ ಮೈಸೂರಿಗೆ ಟ್ರೈನ್ ಹತ್ತಿದ್ದಾರೆ. ಹಣ ಖಾಲಿಯಾಗುತ್ತಿದ್ದಂತೆ ಮತ್ತೆ ಬೆಂಗಳೂರಿಗೆ ಬಂದ ಈ ಮೂವರು ವಿದ್ಯಾರ್ಥಿಗಳು ಕೆಲಸಕ್ಕಾಗಿ ಹೊಟೇಲ್ ವೊಂದಕ್ಕೆ ಹೋಗಿದ್ದರಂತೆ.. ಆಗ ಪೊಲೀಸರು ಮಕ್ಕಳನ್ನ ವಿಚಾರಿಸಿದಾಗ ಸತ್ಯ ತಿಳಿದಿದ್ದು, ಪೊಲೀಸರು ಮಕ್ಕಳನ್ನ ಪೋಷಕರಿಗೆ ಒಪ್ಪಿಸಿದ್ದಾರೆ.