ತುಮಕೂರಿನ ಮಠದ ಹಿಂಭಾಗ ಕೃಷಿ ಹೊಂಡಕ್ಕೆ ಬಿದ್ದು ಮಕ್ಕಳು ಸಾವು..!

1 Min Read

 

ನೀರಿರುವ ಕೆರೆ, ಹೊಳೆ ಈ ಥರದ ಜಾಗದಲ್ಲೆಲ್ಲಾ ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಫೋಷಕರು ಸೇರಿದಂತೆ ಶಾಲೆಗಳಲ್ಲೂ ಕಿವಿ ಮಾತು ಹೇಳುತ್ತಾರೆ. ಆದರೂ ನೀರಿನಿಂದ ಪ್ರಾಣ ಕಳೆದುಕೊಳ್ಳುವ ಮಕ್ಕಳ ಸಂಖ್ಯೆ ಮುಂದುವರೆಯುತ್ತಲೆ ಇರುತ್ತದೆ. ಇದೀಗ ತುಮಕೂರಿನ ಸಿದ್ಧಗಂಗಾ ಮಠದ ಇಬ್ಬರು ಮಕ್ಕಳು ನೀರಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ಘಡನೆ ನಡೆದಿದೆ.

ಕೈ ತೊಳೆಯುವುದಕ್ಕೆಂದು ಹೋದಾಗ ಈ ದುರ್ಘಟನೆ ನಡೆದಿದೆ. ಕೃಷಿ ಹೊಂಡದಲ್ಲಿ ಬಿದ್ದು ನಾಲ್ವರು ಮೃತ ಪಟ್ಟಿದ್ದಾರೆ. ಸಿದ್ಧಗಂಗಾ ಮಠದ ಹಿಂಭಾಗದಲ್ಲಿ ನೀರಿನ ಕಟ್ಟೆಯಲ್ಲಿ ಈ ದುರ್ಘಟನೆ ನಡೆದಿದೆ. 11 ವರ್ಷದ ಶಂಕರ್, 11 ವರ್ಷದ ಹರ್ಷಿತಾ, 33 ವರ್ಷದ ಲಕ್ಷ್ಮೀ, 40 ವರ್ಷದ ಮಹದೇವಪ್ಪ ಮೃತಪಟ್ಟವರು.

ಮೃತ ಪಟ್ಟ ಇಬ್ಬರು ಮಕ್ಕಳು ಮಠದಲ್ಲಿಯೇ ವಿದ್ಯಾಭ್ಯಾಸ ಮಾಡುತ್ತಿದ್ದರು. ಕೈತೊಳೆಯಲೆಂದು ಕೃಷಿ ಹೊಂಡಕ್ಕೆ ತೆರಳುದ್ದಾರೆ. ಕಾಲು ಜಾರಿ ಬಿದ್ದಿದ್ದು ಪೋಷಕರ ಗಮನಕ್ಕೂ ಬಂದಿದೆ. ಮಕ್ಕಳನ್ನು ರಕ್ಷಿಸಲು ಹೋಗಿ ಪೋಷಕರು ನೀರು ಪಾಲಾಗಿದ್ದಾರೆ. ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಬಂದಿದ್ದು, ಅಗ್ನಿಶಾಮಕ ಸಿಬ್ಬಂದಿಗೂ ವಿಷಯ ಮುಟ್ಟಿಸಿ, ಸದ್ಯ ಮೃತದೇಹಗಳನ್ನು ಹೊರತೆಗೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *