ರಾಯಚೂರು: ಜಿಲ್ಲೆಯ ಕಟಕನೂರು ಗ್ರಾಮಕ್ಕೆ ಯಾವುದಾದರೂ ಶಾಪ ಕಾಡುತ್ತಿದೆಯಾ..? ಇಂಥದ್ದೊಂದು ಪ್ರಶ್ನೆ ಕಾಡಲು ಶುರುವಾಗಿರೋದು ಆ ಗ್ರಾಮದಲ್ಲಿ ಕಾಡುತ್ತಿರುವ ಸಮಸ್ಯೆಗೆ. ಅದು ಮಕ್ಕಳ ವಿಚಾರಕ್ಕೆ.
ಈ ಗ್ರಾಮದ ಮಕ್ಕಳು ಹುಟ್ಟಿದಾಗ ಆರೋಗ್ಯವಾಗಿಯೇ ಇರುತ್ತಾರೆ. ಆದ್ರೆ ಹುಟ್ಟಿದ ಬಳಿಕ ಅದ್ಯಾವುದೇ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಅದೆಷ್ಟೇ ಆಸ್ಪತ್ರೆಗೆ ಅಲೆದಾಡಿದ್ರು ಮಕ್ಕಳ ಸಮಸ್ಯೆಗೆ ಮಾತ್ರ ಪರಿಹಾರವೇ ಸಿಗುತ್ತಿಲ್ಲ. ಬುದ್ಧಿಮಾಂದ್ಯತೆ, ಅಂಗವಿಕಲತೆ ಹೀಗೆ ಹಲವು ಸಮಸ್ಯೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಅವಳಿ ಮಕ್ಕಳಾದರೂ ಒಂದು ಮಗು ಆರೋಗ್ಯವಾಗಿದ್ದರೆ, ಮತ್ತೊಂದು ಮಗು ಸಮಸ್ಯೆಯಿಂದ ಬಳಲುವಂತಾಗಿದೆ.
ಸುಮಾರು ವರ್ಷಗಳಿಂದಲೂ ಗ್ರಾಮದಲ್ಲಿ ಈ ಸಮಸ್ಯೆ ಕಾಡುತ್ತಿದೆ. ಪ್ರವಾಹದ ಬಳಿಕ 2011ರಲ್ಲಿ ಗ್ರಾಮ ಸ್ಥಳಾಂತರಗೊಂಡಿತ್ತು. ಅಂದಿನಿಂದಲೂ ಈ ಸಮಸ್ಯೆಯನ್ನ ಗ್ರಾಮದ ಜನ ಎದುರಿಸುತ್ತಿದ್ದಾರೆ. ಇದು ಯಾವ ಶಾಪ ಅಂತ ಚಿಂತೆಗೀಡಾದರೂ ಕುಡಿಯುವ ನೀರಿನ ಸಮಸ್ಯೆ ಇರಬಹುದಾ ಎಂಬ ಶಂಕೆಗೂ ಎದುರಾಗಿದೆ.