ಬೆಂಗಳೂರು: ಕೊರೊನಾ ಸಂಕಷ್ಟದಿಂದ ಶೈಕ್ಷಣಿಕ ಬೆಳವಣಿಗೆ ಸಂಪೂರ್ಣವಾಗಿ ಕುಂಠಿತವಾಗಿತ್ತು. ಇದೀಗ ಎಲ್ಲವೂ ಹಂತ ಹಂತವಾಗಿ ಸರಿಯಾಗುತ್ತಿದೆ. ಅದರಲ್ಲೂ ಮಕ್ಕಳಿಗೆ ಶಾಲೆಗಳು ತೆರೆದಿವೆ. ಇಂದಿನಿಂದ 1-5 ನೇ ತರಗತಿ ಮಕ್ಕಳಿಗೂ ಶಾಲೆ ಆರಂಭವಾಗಿದೆ.
ಕೊರೊನಾದಿಂದಾಗಿ ಕಳೆದ 5 ತಿಂಗಳಿಂದ ಶಾಲೆಗಳು ಮುಚ್ಚಿದ್ದವು. ಇಂದಿನಿಂದ ಪುನಾರಾರಂಭವಾಗಿದೆ. ಒಂದಷ್ಟು ಕಂಡಿಷನ್ ಅಪ್ಲೈ ಆಗಿದೆ. ಹೊಸ ಮಾರ್ಗಸೂಚಿಗಳನ್ನು ನೀಡಲಾಗಿದೆ. ಮೊದಲ ಐದು ದಿನ ಅರ್ಧ ದಿನವಷ್ಟೇ ಶಾಲೆಗಳನ್ನ ನಡೆಸಲು ಸರ್ಕಾರ ನಿರ್ಧರಿಸಿದೆ. ಜೊತೆಗೆ ಶಾಲೆಗೆ ಬರುವ ಮಕ್ಕಳಿಗೆ ಪೋಷಕರ ಒಪ್ಪಿಗೆ ಪತ್ರ ಕಡ್ಡಾಯವಾಗಿರಬೇಕಾಗಿದೆ.
50 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್ ಮಾಸ್ಕ್ ಹಾಕಿಕೊಂಡೆ ಶಾಲೆಗೆ ಬರಬೇಕು. ಜೊತೆಗೆ ಶಿಕ್ಷಕರಿಗೆ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಹಾಕಿಸಿಕೊಂಡಿರಬೇಕು. ಶೇಕಡ 50 ರಷ್ಟು ಹಾಜರಾತಿಯಲ್ಲಿ ಶಾಲೆ ನಡೆಸಲು ಸೂಚಿಸಲಾಗಿದೆ. ಇನ್ನು ಸೋಮವಾರದಿಂದ ಶುಕ್ರವಾರದವರೆಗೆ ಮಾತ್ರ ಶಾಲೆಗಳು ನಡೆಯಲಿವೆ. ಇನ್ನುಳಿದ ಎರಡು ದಿನ ಶಾಲೆಗಳ ಕ್ಲೀನಿಂಗ್ ಕಾರ್ಯ ನಡೆಯಲಿದೆ.
ಹೊಸ ಮಾರ್ಗಸೂಚಿಯಲ್ಲಿ ಒಂದಷ್ಟು ಅಂಶಗಳನ್ನ ಸರ್ಕಾರ ನೀಡಿದೆ. ಮಕ್ಕಳಲ್ಲಿ ಸೋಂಕು ಇರೋದನ್ನ ದೃಢಪಡಿಸಿಕೊಳ್ಳಬೇಕು. ಶಾಲೆಯಲ್ಲಿ ಮಕ್ಕಳಿಗೆ ಬಿಸಿ ನೀರಿನ ವ್ಯವಸ್ಥೆ ಮಾಡಿರಬೇಕು. ವಿದ್ಯಾರ್ಥಿಗಳು ಆನ್ ಲೈನ್ ಅಥವಾ ಆಫ್ಲೈನ್ ತರಗತಿಗೆ ಅವಕಾಶವಿದೆ. ಮಕ್ಕಳಲ್ಲಿ ಒಂದು ಮೀಟರ್ ಅಂತರ ಪಾಲನೆ ಮಾಡಬೇಕು ಎಂಬ ಹೊಸ ನಿಯಮಗಳನ್ನ ಜಾರಿಗೆ ತಂದಿದೆ.