ಚಿಕ್ಕಮಗಳೂರು: ಏಪ್ರಿಲ್ 24 ರಂದು ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಗಣೇಶ್, ಒಂದೂವರೆ ತಿಂಗಳು ಮನೆಯವರ ಜೊತೆ ದಿನಗಳೆದು ಬಳಿಕ ಸೇವೆಗೆ ಹಾಜರಾಗಲು ಹೊರಟಿದ್ದರು. ಆದರೆ ಅಸ್ಸಾಂ ತಲುಪುವಷ್ಟರಲ್ಲಿ ಅವರ ನಿಧನದ ಸುದ್ದಿ ಹೊರಬಂದಿದೆ. ಕಿಶನ್ ಗಂಜ್ ನ ರೈಲ್ವೇ ನಿಲ್ದಾಣದ ಬಳಿ ಅವರ ಮೃತದೇಹ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಯೋಧ ಗಣೇಶ್ ಚಿಕ್ಕಮಗಳೂರಿನ ಮಸಿಗದ್ದೆಗೆ ಬಂದಿದ್ದರು. ಬಳಿಕ ಬೆಂಗಳೂರಿನಿಂದ ಜೂನ್ 9 ರಂದು ಗುವಾಹಟಿಗೆ ಹೊರಡಿದ್ದರು. ಜೂನ್ 12 ರಂದು ಕರ್ತವ್ಯಕ್ಕೆ ಹಾಜರಾಗಬೇಕಿತ್ತು. ಆದರೆ ಬಿಹಾರದ ಕಿಶನ್ ಗಂಜ್ ರೈಲ್ವೇ ನಿಲ್ದಾಣದಲ್ಲಿಯೇ ಅವರ ಮೃತದೇಹ ಪತ್ತೆಯಾಗಿದೆ. ಅವರ ಲಗೇಜ್ ಬ್ಯಾಗ್ ಕೂಡ ರೈಲ್ವೆ ಲಗೇಜ್ ರೂಮಿನಲ್ಲಿಯೇ ಇದೆ.
ಅವರ ಮೃತದೇಹ ಕಂಡ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿದ್ದರು. ಆಂಬುಲೆನ್ಸ್ ನವರು ಗುರುತಿನ ಚೀಟಿಯಿಂದ ಮನೆ ನಂಬರ್ ಪಡೆದು ಕರೆ ಮಾಡಿ ವಿಷಯ ತಿಳಿಸಿದರು. ಮೊದಲಿಗೆ ಗಣೇಶ್ ಅವರ ತಂದೆಗೆ ಅರ್ಥವಾಗಿರಲಿಲ್ಲ. ಬಳಿಕ ಮಾವ ಫೋನ್ ತೆಗೆದುಕೊಂಡು ಮಾತನಾಡಿದಾಗಲೇ ತಿಳಿಧ್ದು, ಗಞೇಶ್ ನಿಧನರಾಗಿದ್ದಾರೆ ಅಂತ. ಒಂದೂವರೆ ತಿಂಗಳು ಸಂತಸದಲ್ಲಿ ಇದ್ದ ಮಗ ಈಗ ಇಲ್ಲ ಎಂದು ತಿಳಿದಾಗ ಪೋಷಕರ ಹೈದರ ಎಂಥ ಸ್ಥಿತಿ ತಲುಪಿರಬೇಡ. ಯೋಧ ಗಣೇಶ್ ತಮ್ಮ ಬಳಿಯೇ 30 ಸಾವಿರಕ್ಕೂ ಹೆಚ್ಚು ಹಣವನ್ನಹ ಇಟ್ಟುಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಈ ದುರ್ಘಟನೆ ನಡೆದಿರಬಹುದಾ ಎಂಬ ಅನುಮಾನಗಳು ವ್ಯಕ್ತವಾಗಿದೆ.