ಹಿರಿಯೂರು, (ನ.12) : ಕನ್ನಡ ಸಾಹಿತ್ಯ ಪರಿಷತ್ ಕೇವಲ ಭಾಷೆಗೆ ಸೀಮಿತವಾಗದೇ ಬದುಕು ಕಟ್ಟಿಕೊಡುವ ನಿಟ್ಟಿ ನಲ್ಲಿ ಕಾರ್ಯೋನ್ಮಖವಾಗ ಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಚಿಕ್ಕಪ್ಪನಹಳ್ಳಿ ಷಣ್ಮುಖ ಹೇಳಿದರು.
ನಗರದ ಶ್ರೀಶೈಲ ವೃತ್ತದ ಬಳಿ ಇರುವ ಕೃಷಿಕ ಸಮಾಜ ಸಭಾಂಗಣದಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಹಿತ್ಯ ಕೇತ್ರದಲ್ಲಿ ಈ ನೆಲಕ್ಕೆ ಹೊಸ ಶ್ರೀಮಂತಿಕೆ ಕೊಡಬೇಕೆಂದು ಹೊಸ ಕನಸು ಕಂಡಿದ್ದೇನೆ. ಕನ್ನಡಕೊಸ್ಕರ ಬದುಕು ಕಟ್ಟಿಕೊಡಬೇಕು ಎಂದು ಹೊರಟಿದ್ದೇನೆ. ನನ್ನ ಬದುಕಿನಾಚೆ ಸಾಹಿತ್ಯ ಪರಿಷತ್ತಲ್ಲಿ ಹೊಸ ಕ್ರಾಂತಿ ಬರೆಯಲು ಸಿದ್ದನಿದ್ದೇನೆ. ಸಾಹಿತ್ಯ ಪರಿಷತ್ ಪಕ್ಷಾತೀತ, ಎಲ್ಲಾ ಪಕ್ಷದವರು ನನಗೆ ಬೆಂಬಲ ನೀಡುತ್ತಿರುವುದು ಸಂತೋಷದಾಯಕ. ಎಲ್ಲಾ ಸಮುದಾಯದ ಜನರು, ಮಠಾಧೀಶರು, ಶಾಸಕರು, ಮಂತ್ರಿಗಳು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಮೂಲತಃ ನಾನು ಹುಟ್ಟು ಹೋರಾಟಗಾರ. ಬರೀ ಪತ್ರಕರ್ತನಾಗಿರದೇ ಭದ್ರಾ ಮೇಲ್ದಂಡೆ ಸೇರಿದಂತೆ ಜನಪರ, ರೈತಪರ ಹೋರಾಟಗಳಲ್ಲಿ ಮೂಂಚೂಣಿಯಾಗಿ ಕಾರ್ಯನಿರ್ವಹಿದ್ದೇನೆ. ಕನ್ನಡ ನೆಲ, ಜಲದ ವಿಚಾರವಾಗಿ ನಾನು ಮೊದಲು ಎತ್ತಿದ ಕೈ. ಈ ಹಿಂದೆ ಸಾಹಿತ್ಯ ಪರಿಷತ್ ಬರೀ ಕವಿಗೋಷ್ಠಿ, ಸಾಹಿತ್ಯ ಇಷ್ಟಕ್ಕೆ ಸೀಮಿತವಾಗಿದೆ. ಆದರೆ ಜಿಲ್ಲೆಯಲ್ಲಿ 7ಸಾವಿರ ಸಾಹಿತ್ಯಾಕ್ತ ಮತದಾರರು ಇದ್ದರೂ ಯಾವುದೇ ಹೋರಾಟದಲ್ಲಿ ಭಾಗಿಯಾಗಿಲ್ಲ. ಭದ್ರಾ ಹೋರಾಟದಲ್ಲಿ ಭಾಗಿಯಾಗಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು, ರಾಜ್ಯದಲ್ಲಿ ಯಾರೇ ಸಿಎಂ ಆದರೂ ಎಲ್ಲರಲ್ಲಿಯೂ ತುಂಬಾ ಒಡನಾಟವಿದೆ. ನಾನು ಅಧ್ಯಕ್ಷನಾದರೆ ಎರಡೇ ವರ್ಷದಲ್ಲಿ 4ಕೋಟಿ ವೆಚ್ಚದಲ್ಲಿ ಕನ್ನಡಭವನ ನಿರ್ಮಾಣ ಮಾಡುತ್ತೇನೆ.
ಹಾಗೂ ನನಗೆ ಯಾವುದೇ ಅಹಂಕಾರವಿಲ್ಲ. ನಾನು ಎಂದಿಗೂ ಆಸೆ ಪಟ್ಟವನಲ್ಲ. ನನ್ನನ್ನು ಗೆಲ್ಲಿಸಿದರೆ ಸ್ವತಃ ನೀವೇ ಗೆದ್ದಂತೆ. ನೀವಿಟ್ಟ ಭರವಸೆಗಳಿಗೆ ನಾನೆಂದಿಗೂ ಮೋಸ ಮಾಡುವುದಿಲ್ಲ. ಅನಿವಾರ್ಯವಾಗಿ ನನ್ನ ಸ್ನೇಹಿತರ ಒತ್ತಾಸೆ ಮೇರೆಗೆ ಸ್ಪರ್ಧೆ ಮಾಡುತ್ತಿದ್ದೇನೆ. ಹಾಗಾಗಿ ಈ ಬಾರಿ ನನ್ನನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಸಂಗೇನಹಳ್ಳಿ ಅಶೋಕ್ ಕುಮಾರ್ ಮಾತನಾಡಿ, ಷಣ್ಮುಖ ಅವರು ನಿಮ್ಮೆಲ್ಲರ ಸಹಕಾರದೊಂದಿಗೆ 2 ವರ್ಷದಲ್ಲೇ ಜಿಲ್ಲೆಯಲ್ಲಿ ಕನ್ನಡಭವನ ನಿರ್ಮಾಣ ಮಾಡುತ್ತಾರೆ. ಅವರನ್ನು ಆಯ್ಕೆ ಮಾಡಿದರೆ ಕನ್ನಡ ಸಾಹಿತ್ಯ ಪರಿಷತ್ತು ಪ್ರತ್ಯಕವಾದ ವಿನ್ಯಾಸವನ್ನು ಪಡೆದುಕೊಳ್ಳುತ್ತದೆ. ಯಾಕಂದರೆ ಈಗಿರುವ ಹಣದ ಜೊತೆಗೆ ಸಂಬಂಧಿಸಿದ ಮಂತ್ರಿಗಳ ಬಳಿ ಅನುದಾನವನ್ನು ತೆಗೆದುಕೊಂಡು ಬಂದು ಬೃಹತ್ ಕನ್ನಡಭವನ ನಿರ್ಮಾಣ ಮಾಡುವಲ್ಲಿ ಶ್ರಮಿಸುತ್ತಾರೆ. ಹೋರಾಟ ಹಿನ್ನೆಲೆ ಇರುವ ಷಣ್ಮುಖ ಅವರನ್ನು ಈ ಬಾರಿ ಗೆಲ್ಲಿಸಲೇಬೇಕು ಎಂದು ಮನವಿ ಮಾಡಿದರು.
ಜೆ.ಡಿ.ಎಸ್ ಜಿಲ್ಲಾಧ್ಯಕ್ಷ ಡಿ.ಯಶೋಧರ ಮಾತನಾಡಿ, ಷಣ್ಮುಖ ಅವರನ್ನು ಬಹಳಷ್ಟು ವರ್ಷಗಳಿಂದ ಗಮನಿಸಿದ್ದೇನೆ. ಮಾಧ್ಯಮ ಲೋಕದಲ್ಲಿ ದ್ದುಕೊಂಡೇ ಭ್ರಷ್ಟಾಚಾರ ಸೋಂಕನ್ನು ಮೈಗಂಟಿಸಿಕೊ ಳ್ಳದ ವ್ಯಕ್ತಿ. ಇವರು ಜನಪರ, ರೈತಪರ ಹೋರಾಟದಲ್ಲಿ ಹೆಜ್ಜೆ ಹಾಕಿದವರು. ಅವರ ಬರಹದ ಮುಖಾಂತರ ಹೋರಾಟಗಳಲ್ಲಿ ಮುಂಚೂಣಿಯಲ್ಲಿರುತ್ತಿದ್ದರು. ಯಾವುದೇ ಅಹಂಕಾರದ ಸೋಂಕನ್ನು ಮೈಗೆ ಅಂಟಿಸಿಕೊಂಡವರಲ್ಲ. ಸರಳ, ಸಜ್ಜನಿಕೆ ವ್ಯಕ್ತಿತ್ವ ಉಳ್ಳವರು. ನಾನು ಮಾಧ್ಯಮ ಲೋಕದಲ್ಲಿದ್ದೇನೆ ಎಂಬ ಅಮ್ಮು-ಬಿಮ್ಮು ಇವರಲ್ಲಿರದೇ ಜನಾನುರಾಗಿ ವ್ಯಕ್ತಿಯಾಗಿ ದ್ದಾರೆ. ತಮ್ಮ ಬರಹದ ಮೂಲಕ ಜನ ಜಾಗೃತಿ ಮೂಡಿಸುವ ಏಕೈಕ ವ್ಯಕ್ತಿ. ಹಾಗಾಗಿ ಷಣ್ಮುಖ ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸ್ಥಾನಕ್ಕೆ ಅತ್ಯಂತ ಯೋಗ್ಯವಾದ ವ್ಯಕ್ತಿ ನಮ್ಮ ಬೆಂಬಲ ಅವರಿಗಿದೆ ಎಂದರು.
ಮಾಜಿ ಕಸಾಪ ತಾಲ್ಲೂಕು ಅಧ್ಯಕ್ಷ ಧನಂಜಯ ಮಾತನಾಡಿ
ಹಿರಿಯೂರಿನ ತಾಲ್ಲೂಕಿನ ಸಾಹಿತ್ಯ ಪರಿಷತ್ತಿನ ಸದಸ್ಯರು ಸಾಹಿತಿಗಳು ಹೋರಾಟಗಾ ರರು, ಎಲ್ಲರೂ ಒಟ್ಟಾಗಿ ಚುನಾವಣೆ ದಿನ ಮತನೀಡಿ ನಿಮ್ಮ ಗೆಲುವಿಗೆ ಬೆನ್ನುಲುಬಾಗಿ ನಿಲ್ಲುತ್ತೇವೆ ಎಂದರು.
ಈ ವೇಳೆ ಕಸಾಪ ಮಾಜಿ ಅಧ್ಯಕ್ಷ ಜಿ.ಎಚ್ ರಾಜು,ಕಸಾಪ ಮಾಜಿ ಶ.ಮಂಜುನಾಥ್ ಮಾತನಾಡಿದರು
ಈ ಸಂದರ್ಭದಲ್ಲಿ ಮಲ್ಲಪ್ಪನಹಳ್ಳಿ ಮಹಲಿಂಗಪ್ಪ ,ರವೀಂದ್ರನಾಥ್ ಪಿಟ್ಲಟಲಿ, ಎಂ.ಡಿ.ರವಿ , ಚಮನ್ ಷರೀಪ್, ಅಶ್ವಕ್ ಆಹಮದ್, ದಿನೇಶ್ ಗೌಡಗೆರೆ, ತಿಪ್ಪೇಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಶಿವಣ್ಣ, ಕೂನಿಕೆರೆ ರಾಮಣ್ಣ ರಂಗಸ್ವಾಮಿ, ಇನ್ನಿತರರು ಇದ್ದರು.