ಚಿಕ್ಕಬಳ್ಳಾಪುರ: ಕಯಡಿದ ಅಮಲಿನಲ್ಲಿ ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ವ್ಯಕ್ತಿ ನೀರು ಪಾಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. 40 ವರ್ಷದ ಶಾಂತರಾಜು ಸಾವನ್ನಪ್ಪಿದ ವ್ಯಕ್ತಿ.
ಬಾಪೂಜಿನಗರದ ಶಾಂತರಾಜುಗೆ ಆತನ ಸ್ನೇಹಿತ ಮೀನು ಬೇಕು ಎಂದು ಕೇಳಿದ್ದನಂತೆ. ಶಾಂತರಾಜು ಅದೇ ಉತ್ಸಾಹದಲ್ಲಿ ಮೀನು ಹಿಡಿಯಲು ಹೋಗಿದ್ದಾನೆ. ಕುಡಿದ ಅಮಲಿನಲ್ಲಿ ಕಂದಾವಾರ ಕೆರೆಗೆ ಹೋದ ಶಾಂತರಾಜು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇಬ್ಬರು ಸ್ನೇಹಿತರು ಕುಡಿದೆ ಹೋಗಿದ್ದಾರೆ. ಈ ವೇಳೆ ಶಾಂತರಾಜುಗೆ ಕಾಲು ಜಾರಿದೆ. ಸಂಬಂಧ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕ್ಕಬಳ್ಳಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.