CHICKEN PRICE : ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ ಚಿಕನ್ ಬೆಲೆ ; ಕೆಜಿಗೆ ರೂ.720/-…!

ಇಸ್ಲಾಮಾಬಾದ್ : ನೆರೆಯ ಪಾಕಿಸ್ತಾನದಲ್ಲಿ ಚಿಕನ್ ಬೆಲೆ ಗಗನಕ್ಕೇರಿದೆ. ಕರಾಚಿ ಸೇರಿದಂತೆ ಇತರೆ ನಗರಗಳಲ್ಲಿ ಕೆಜಿ ಕೋಳಿ(ಚಿಕನ್) ಬೆಲೆ 720 ರೂ.ಗೆ ಏರಿಕೆಯಾಗಿದೆ. ಪಾಕಿಸ್ತಾನದ ಇತಿಹಾಸದಲ್ಲಿ ಇಷ್ಟೊಂದು ಬೆಲೆ ಏರಿಕೆಯಾಗಿರುವುದು ಇದೇ ಮೊದಲು ಎಂದು ಜನರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆದರೆ, ಕೋಳಿ ವ್ಯಾಪಾರಗಳು ತಮ್ಮ ವ್ಯಾಪಾರವನ್ನು ನಿಲ್ಲಿಸಿರುವುದು ಕೋಳಿ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಪಾಕಿಸ್ತಾನದ ಮಾಧ್ಯಮಗಳು ಹೇಳಿವೆ.

ಕೋಳಿಗೆ ಒದಗಿಸುವ ಆಹಾರದ ತೀವ್ರ ಕೊರತೆಯಿಂದಾಗಿ ಕೋಳಿ ವ್ಯಾಪಾರಿಗಳು ತಮ್ಮ ವ್ಯಾಪಾರವನ್ನು ನಿಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಕರಾಚಿಯಲ್ಲಿ ಒಂದು ಕೆಜಿ ಚಿಕನ್ ಬೆಲೆ 720 ರೂ. ಇಸ್ಲಾಮಾಬಾದ್, ರಾವಲ್ಪಿಂಡಿ ಸೇರಿದಂತೆ ಇತರ ನಗರಗಳಲ್ಲಿ ಈ ಬೆಲೆ 700-710 ರೂಪಾಯಿಗೆ ತಲುಪಿದೆ.

ಪಾಕಿಸ್ತಾನದ ಎರಡನೇ ಅತ್ಯಂತ ಜನಪ್ರಿಯ ನಗರವಾದ ಲಾಹೋರ್‌ನಲ್ಲಿ ಒಂದು ಕೆಜಿ ಚಿಕನ್ ಗೆ ರೂ.550-600 ನಡುವೆ ಮಾರಾಟ ಮಾಡಲಾಗುತ್ತದೆ.

ಇತಿಹಾಸದಲ್ಲೇ ಕಂಡು ಕೇಳರಿಯದ ಈ ಬೆಲೆಯಿಂದ ಚಿಕನ್ ಪ್ರಿಯರು ಕಂಗಾಲಾಗಿದ್ದಾರೆ. ಬೆಲೆ ಹೆಚ್ಚಿರುವುದರಿಂದ ಪ್ರೊಟೀನ್ ಯುಕ್ತ ಚಿಕನ್ ತಿನ್ನಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ತನಿಖೆ :
ಕೋಳಿಗಳಿಗೆ ಆಹಾರದ ಕೊರತೆ ಏಕೆ ಒದಗಿ ಬಂತು ಎಂದು ಸರ್ಕಾರ ತನಿಖೆ ಆರಂಭಿಸಿದೆ.  ಕೋಳಿ ಬೆಲೆ ಇಳಿಸುವ ಮೂಲಕ ಜನರಿಗೆ ಕಡಿಮೆ ಬೆಲೆಗೆ ಚಿಕನ್ ಒದಗಿಸಲು ಪ್ರಯತ್ನಿಸುತ್ತಿದೆ.

ಕೋಳಿ ಉದ್ಯಮವು ಪಾಕಿಸ್ತಾನದ ಆರ್ಥಿಕತೆಯ ಒಂದು ಪ್ರಮುಖ ಭಾಗವಾಗಿದೆ. ಅದರ ಪೂರೈಕೆ ಸರಪಳಿಗೆ ಯಾವುದೇ ಅಡ್ಡಿಯು ದೇಶದ ಆಹಾರ ಭದ್ರತೆ ಮತ್ತು ಆರ್ಥಿಕ ಸ್ಥಿರತೆಯ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ಪಾಕಿಸ್ತಾನಿ ಮಾಧ್ಯಮ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *