ಮಂಡ್ಯ: ಸಚಿವ ಚೆಲುವರಾಯಸ್ವಾಮಿ ವಿರುದ್ಧ ಲಂಚ ಆರೋಪಮಾಡಲಾಗಿತ್ತು. ಸಚಿವ ಸ್ಥಾನ ಪಡೆದ ಮೂರೇ ತಿಂಗಳಲ್ಲಿ ಅವರ ಮೇಲೆ ಲಂಚದ ಆರೋಪ ಕೇಳಿ ಬಂದಿತ್ತು. ಆದ್ರೆ ಇದಕ್ಕೆ ಸಚಿವ ಚೆಲುವರಾಯಸ್ವಾಮಿ ಅವರು ತನಿಖೆ ನಡೆಯಲಿ ಅಂತಾನೇ ತಿಳಿಸಿದ್ದರು. ನಾನು ಯಾರ ಬಳಿಯೂ ಲಂಚ ತೆಗೆದುಕೊಂಡಿಲ್ಲ. ಪ್ರಕರಣ ಸಂಬಂಧ ತನಿಖೆಯಾಗಲಿ, ಸತ್ಯಾಸತ್ಯತೆ ತಿಳಿಯುತ್ತೆ ಎಂದಿದ್ದರು.
ಬಳಿಕ ರಾಜ್ಯಪಾಲರಿಗೆ ಬಂದ ಪತ್ರದ ಮೂಲ ಹಿಡಿದು ಹೊರಟ ಸಿಐಡಿ ಅಧಿಕಾರಿಗಳು ಇದೀಗ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ಪತ್ರ ಮೈಸೂರಿನ ಪೋಸ್ಟ್ ಆಫೀಸ್ ಒಂದರಲ್ಲಿ ಪೋಸ್ಟ್ ಆಗಿತ್ತು. ಆದರೆ ಅಂದಿನ ಸಿಸಿಟಿವಿಯಲ್ಲಿ ಪತ್ರ ಅಂಟಿಸಿದವರ ಚಹರೆ ಸಿಕ್ಕಿರಲಿಲ್ಲ. ಇದೀಗ ಇಬ್ಬರು ಅಧಿಕಾರಿಗಳು ಸಿಐಡಿ ಅಧಿಕಾರಿಗಳಿಂದ ಲಾಕ್ ಆಗಿದ್ದಾರೆ.
ಕೃಷಿ ಅಧಿಕಾರಿ ಗುರುಪ್ರಸಾದ್, ಇಲಾಖೆ ಅಧಿಕಾರಿ ಸುದರ್ಶನ್ ಎಂಬ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ. ಈ ಇಬ್ಬರು ಚೆಲುವರಾಯಸ್ವಾಮಿ ವಿರುದ್ಧ ಲಂಚದ ಪತ್ರ ಬರೆದು, ರಾಜ್ಯಪಾಲರ ಕಚೇರಿಗೆ ತಲುಪಿಸಿದ್ದರು. ನಕಲಿ ಸಹಿ ಮಾಡಿ ಪತ್ರ ರವಾನೆ ಮಾಡಿದ್ದು ತಿಳಿದು ಬಂದಿದೆ.