ವರ ಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನ ಕೊಂಡುಕೊಳ್ಳಬೇಕಾ..? ಇವತ್ತಿನ ಚಿನ್ನ-ಬೆಳ್ಳಿ ಬೆಲೆ ಇಲ್ಲಿದೆ ನೋಡಿ

 

 

ಚಿನ್ನ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಲೋಹದ ಬೆಲೆ ಜಾಸ್ತಿಯಾಗುತ್ತಾ ಹೋದರೂ ಅದಕ್ಕಿರುವ ಡಿಮ್ಯಾಂಡ್ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ. ಅದಕ್ಕೆ ಬೆಲೆಯಲ್ಲೂ ಏರುಪೇರು ಆಗುತ್ತಲೇ ಇರುತ್ತದೆ. ಆದರೆ ಕಡಿಮೆ ಆಗಿದ್ದಂತು ನೋಡಿಲ್ಲ. ಇವತ್ತಿನ ಚಿನ್ನದ ಬೆಲೆ ಎಷ್ಟಿದೆ ಅಂತ ನೋಡೋದಾದ್ರೆ.

ಇವತ್ತು 22 ಕ್ಯಾರೆಟ್ ಚಿನ್ನದ ಬೆಲೆ ಒಂದು ಗ್ರಾಂಗೆ 5,495 ಆಗಿದೆ. ಇದು ಬೆಂಗಳೂರಿನಲ್ಲಿರುವ ಬೆಲೆ. ಹಾಗೆ 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ 10 ಗ್ರಾಂಗೆ 59,950 ಆಗಿದೆ. ಇನ್ನು 1 ಗ್ರಾಂಗೆ 73 ರೂಪಾಯಿ ಇದೆ. ಒಂದು ಕೆಜಿಗೆ 73 ಸಾವಿರ ಆಗಿದೆ.

ಆಷಾಢ ಕಳೆದು ಶ್ರಾವಣ ಬರುತ್ತಿದ್ದಂತೆ ಶುಭ ಕಾರ್ಯಗಳು ಆರಂಭವಾಗುತ್ತವೆ. ಮದುವೆ ಸಮಾರಂಭಗಳು ಶುರುವಾಗುತ್ತವೆ. ಈ ಬಾರಿ ಅಧಿಕ ಮಾಸ ಬಂದಿರುವ ಕಾರಣ ಇನ್ನು ಶುಭ ಕಾರ್ಯಗಳು ಆರಂಭವಾಗಿಲ್ಲ. ಅದರ ಜೊತೆಗೆ ವರಮಹಾಲಕ್ಷ್ಮೀ ಹಬ್ಬವೂ ಹತ್ತಿರದಲ್ಲೇ ಇರುವ ಕಾರಣ, ಚಿನ್ನ, ಬೆಳ್ಳಿ ಕೊಂಡುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಲಿದೆ. ಆದರೆ ಚಿನ್ನ ಮಾತ್ರ ತೀರಾ ಎಂಬಂತೆ ಇಳಿಕೆಯಾಗುತ್ತಿಲ್ಲ. ನೂರು, ಇನ್ನೂರರ ಗಡಿಯಲ್ಲಿಯೇ ಬೆಲೆ ಏರಿಳಿತ ಕಾಣುತ್ತಿದೆ. ಸಾವಿರ ಎರಡು ಸಾವಿ ಬೆಲೆ ಏನಾದರೂ ಇಳಿದು ಬಿಟ್ಟರೆ, ಚಿನ್ನಾಭರಣ ಪ್ರಿಯರು ಒಂದೇ ಸಲಕ್ಕೆ ಹೆಚ್ಚಿನ ಮಟ್ಟದಲ್ಲಿ ಚಿನ್ನ ತೆಗೆದುಕೊಳ್ಳುವುದಂತು ಗ್ಯಾರಂಟಿ.

ಚಿನ್ನಾಭರಣ ಖರೀದಿಗೆ ಹೋಗುವ ಮಹಿಳೆಯರೆಲ್ಲಾ ಅಪೇಕ್ಷೆ ಪಡುತ್ತಿರುವ ದಿನ ಅದ್ಯಾವಾಗ ಬರುತ್ತೋ ಏನೋ. ಆದಷ್ಟು ಬೇಗ ಚಿನ್ನದ ಬೆಲೆ ಇಳಿಲಿ ಅಂತಾನೇ ಬಯಸುತ್ತಿದ್ದಾರೆ. ಆದ್ರೆ ಏರಿಕೆಯಾಗ್ತಿದೆಯೇ ವಿನಃ ಇಳಿಕೆಯಾಗುತ್ತಿಲ್ಲ.

Share This Article
Leave a Comment

Leave a Reply

Your email address will not be published. Required fields are marked *