ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಮೋಸ : ಅರ್ಜುನ್

suddionenews
1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 10 : ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಮತಗಳನ್ನು ತಿರಸ್ಕಾರ ಹಾಗೂ ತಡೆಹಿಡಿರುವುದನ್ನು ಮರು ಎಣಿಕೆ ಮಾಡುವಂತೆ ಚಿತ್ರದುರ್ಗ ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅರ್ಜುನ್ ಟಿ.ಕೆ.ಒತ್ತಾಯಿಸಿದರು.

ಪತ್ರಕರ್ತರ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಫೋಟೋ ಮಿಸ್ ಮ್ಯಾಚ್, ವೀಡಿಯೋದಲ್ಲಿ ಲೋಪವಿದೆ ಎನ್ನುವ ನಾನಾ ಕಾರಣಗಳನ್ನು ಕೊಟ್ಟು ನಿಜವಾದ ಮತದಾರರನ್ನು ತಿರಸ್ಕರಿಸಲಾಗಿದೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರದಲ್ಲಿ ಆರರಿಂದ ಏಳು ಸಾವಿರ ಮತದಾರರನ್ನು ನೊಂದಾಯಿಸಿದ್ದೇನೆ. ಆದರೆ ನನಗೆ ಬಂದಿರುವುದು 3800 ಮತಗಳು ಮಾತ್ರ. ಉಳಿದ ಮತಗಳು ಎಲ್ಲಿ ಹೋದವು? ಹಾಗಾಗಿ ಪೋಲಿಂಗ್ ಬೂತ್‍ಗೆ ಬಂದು ಮತದಾನ ಮಾಡುವ ಪದ್ದತಿಯಾಗಬೇಕು.

ಚಿಕ್ಕ ಚಿಕ್ಕ ಕಾರಣಗಳಿಗಾಗಿ ಮತಗಳನ್ನು ಹೋಲ್ಡ್ ಮಾಡಿ ತಿರಸ್ಕರಿಸಿರುವುದರಿಂದ ಮರು ಎಣಿಕೆಗೆ ಅರ್ಜಿನ್ ಟಿ.ಕೆ. ಆಗ್ರಹಿಸಿದರು.

ಯೂತ್ ಕಾಂಗ್ರೆಸ್‍ನಲ್ಲಿ ಪಕ್ಷದ ತತ್ವ ಸಿದ್ದಾಂತಗಳನ್ನಿಟ್ಟುಕೊಂಡು ಬೇರು ಮಟ್ಟದಿಂದ ಸಂಘಟಿಸಿರುವ ನನಗೆ ಯೂತ್ ಕಾಂಗ್ರೆಸ್ ಚುನಾವಣೆಯಲ್ಲಿ ಗೆಲುವು ಸಿಗಬೇಕಿತ್ತು. ಆದರೆ ಈ ಚುನಾವಣೆಯಲ್ಲಿ ಮೋಸವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಆಪಾದಿಸಿದರು.

ಹಿರಿಯೂರು ತಾಲ್ಲೂಕು ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೇಶವ ಜೆ.ಜೆ.ಹಳ್ಳಿ ಮಾತನಾಡಿ ಹಿರಿಯೂರು ಯೂತ್ ಕಾಂಗ್ರೆಸ್ ಚುನಾವಣಾ ಫಲಿತಾಂಶದಲ್ಲಿ ಮೋಸವಾಗಿದೆ. 12200 ಮತಗಳು ಬಂದಿವೆ. 2390 ಮತಗಳು ತಿರಸ್ಕಾರವಾಗಿರುವುದು ಏಕೆ? ಈ ಚುನಾವಣೆಯ ಫಲಿತಾಂಶ ಪಾರದರ್ಶಕವಾಗಿಲ್ಲ. ಮರು ಎಣಿಕೆಯಾಗಬೇಕು. ಅಕ್ರಮ ನಡೆದಿರುವ ಬಗ್ಗೆ ಅನುಮಾನವಿದೆ. ಈ ಸಂಬಂಧ ಪಕ್ಷದ ನಾಯಕರುಗಳ ಗಮನಕ್ಕೆ ತರಲಾಗುವುದೆಂದು ಹೇಳಿದರು. ಕರುಣ, ಅಜೀಜ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *