ಸ್ಯಾಂಡಲ್ ವುಡ್ ಡಿವೈನ್ ಸ್ಟಾರ್ ಈಗ ಪ್ಯಾನ್ ಇಂಎಇಯಾ ಸ್ಟಾರ್ ಆಗಿದ್ದಾರೆ. ಬೇರೆ ಬೇರೆ ಭಾಷೆಯ ಸಿನಿಮಾಗಳು ರಿಷಬ್ ಶೆಟ್ಟಿಯನ್ನೇ ಅರಸಿ ಬರುತ್ತಿವೆ. ಕಳೆದ ಕೆಲವು ತಿಂಗಳ ಹಿಂದೆ ತೆರೆಕಂಡು ಸಕ್ಸಸ್ ಆಗಿದ್ದ ಹನುಮಾನ್ ಸಿನಿಮಾ ಸೀಕ್ವೆಲ್ ತಯಾರಿ ನಡೆಯುತ್ತಿದೆ. ನಿರ್ದೇಶಕ ಪ್ರಶಾಂತ್ ವರ್ಮಾ ಮೇಲೆ ಎಲ್ಲರ ಕಣ್ಣು ಇದೆ. ಅವರ ಜೊತೆಗಿನ ಅವಕಾಶಕ್ಕಾಗಿ ಸಾಕಷ್ಟು ಜನ ಕಾಯುತ್ತಿದ್ದಾರೆ. ಆದರೆ ಪ್ರಶಾಂತ್ ವರ್ಮರಿಗೆ ಹನುಮಾನಾಗಿ ಕಂಡಿದ್ದು ರಿಷಬ್ ಶೆಟ್ಟಿ. ಇದೀಗ ಬಾಲಿವುಡ್ ನಿರ್ದೇಶಕನ ಜೊತೆಗೂ ಸಿನಿಮಾ ಒಪ್ಪಿಕೊಂಡಿದ್ದಾರೆ.
ಬಾಲಿವುಡ್ ನಿರ್ದೇಶಕ ಸಂದೀಪ್ ಸಿಂಗ್, ರಿಷಬ್ ಶೆಟ್ಟಿ ಅವರಲ್ಲಿ ಶಿವಾಜಿ ಮಹಾರಾಜ್ ಅವರನ್ನ ಕಂಡಿದ್ದಾರೆ. ಇಂದು ಈ ಸಿನಿಮಾ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಲಾಗಿದೆ. ರಿಷಬ್ ಶೆಟ್ಟಿ ಫಸ್ಟ್ ಲುಕ್ ಪೋಸ್ಟರ್ ಅನ್ನ ರಿಲೀಸ್ ಮಾಡಿದ್ದಾರೆ. ಸಿನಿಮಾ ಬಗ್ಗೆ ಒಂದಷ್ಟು ಹೆಮ್ಮೆಯ ವಿಚಾರವನ್ನು ಬರೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ನನ್ನ ಮೊದಲ ಹಾಗೂ ಏಕೈಕ ಆಯ್ಕೆ. ಅವರು ನಿಜವಾಗಿಯೂ ಛತ್ರಪತಿ ಶಿವಾಜಿ ಮಹಾರಾಜರ ಶಕ್ತಿ, ಚೈತನ್ಯ ಹಾಗೂ ಶೌರ್ಯವನ್ನು ಸಕಾರಗೊಳಿಸಿದ್ದಾರೆ. ಈ ಚಿತ್ರವೂ ನನ್ನ ಹಲವು ವರ್ಷಗಳ ಕನಸು. ಈ ಸಿನಿಮಾವನ್ನು ಬೆಳ್ಳಿ ತೆರೆಗೆ ತರಲು ರೆಡಿಯಾಗಿದ್ದೇನೆ ಎಂದು ನಿರ್ದೇಶಕ ಸಂದೀಪ್ ಸಿಂಗ್ ಹೇಳಿದ್ದಾರೆ.
ಇನ್ನು ಪೋಸ್ಟರ್ ನಲ್ಲಿ ಖಡ್ಗ ಹಿಡಿದು ಕಾಣಿಸಿಕೊಂಡಿದ್ದಾರೆ. ಫಸ್ಟ್ ಲುಕ್ ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ಈ ಸಿನಿಮಾ ಮಾಡುವುದಕ್ಕೂ ಮುನ್ನ ನೀವೂ ಇತಿಹಾಸವನ್ನೊಮ್ಮೆ ಓದಿ, ಹಣಕ್ಕೋಸ್ಕರ ಎಲ್ಲಾ ಸಿನಿಮಾ ಮಾಡಬೇಡಿ ಎಂದಿದ್ದಾರೆ. ಇನ್ನು ಒಂದಷ್ಟು ಜನ ಈ ಸಿನಿಮಾದಲ್ಲಿ ಬೆಳವಾಡಿ ಚೆನ್ನಮ್ಮನ ಬಳಿ ಕ್ಷಮೆ ಕೇಳುವ ದೃಶ್ಯ ಇರಲೇಬೇಕು ಎಂದು ಕಮೆಂಟ್ ಹಾಕಿದ್ದಾರೆ.