ಅಪ್ಪು ಆತ್ಮದ ಜೊತೆ ಮಾತಾಡಿದೆ ಎಂದ ಚಾರ್ಲಿ : ಅಭಿಮಾನಿಗಳಿಂದ ಫುಲ್ ಕ್ಲಾಸ್..!

ಅಪ್ಪು ಇನ್ನಿಲ್ಲ ಎಂಬ ಸುದ್ದಿಯನ್ನ ಕರುನಾಡ ಮಂದಿ ಅರಗಿಸಿಕೊಳ್ಳೋದಕ್ಕೂ ಸಾಧ್ಯವಿಲ್ಲ. ಹನ್ನೆರಡು ದಿನವಾದರೂ ಅಂತೊಬ್ಬ ಮಹಾ ಪುಣ್ಯಾತ್ಮನನ್ನ ಕಳೆದುಕೊಂಡ ಜನ ಇನ್ನು ಆ ನೋವಲ್ಲೇ ಇದ್ದಾರೆ. ಅಪ್ಪು ಇನ್ನು ಬರಲ್ಲ, ಸಿನಿಮಾ ಮಾಡಲ್ಲ ಎಂಬ ಯಾವ ಸತ್ಯವನ್ನ ಜನಕ್ಕೆ ಒಪ್ಪಿಕೊಳ್ಳಲಾಗ್ತಿಲ್ಲ. ಅವರಿಲ್ಲ ಎಂಬ ಸತ್ಯವನ್ನೇ ಇನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದು ಸಾಮಾನ್ಯ ಜನರ ನೋವಾದರೇ ಇನ್ನು ಬೆಟ್ಟದಷ್ಟು ಆಸೆ, ಪ್ರೀತಿ, ಕನಸು ಇಟ್ಟುಕೊಂಡಿದ್ದ ಕುಟುಂಬದವರ ಸ್ಥಿತಿ ಇನ್ನೇನಾಗಬೇಡ.

ಈ ಮಧ್ಯೆ ವಿದೇಶಿಗನೊಬ್ಬ ತನ್ನ ಯೂಟ್ಯೂಬ್ ನಲ್ಲಿ ಅಪ್ಪು ಬಗ್ಗೆ ಹೇಳಿರುವುದು ಅಭಿಮಾನಿಗಳಿಗೆ ಕೋಪ ನೆತ್ತಿಗೇರುವಂತೆ ಮಾಡಿದೆ. ಪುನೀತ್ ಆತ್ಮದ ಜೊತೆ ಮಾತಾಡಿದೆ ಎಂದಾಗ ಫ್ಯಾನ್ಸ್ ಕೆರಳಿ ಕೆಂಡವಾಗಿದ್ದಾರೆ. ಆತನಿಗೆ ಗ್ರಹಚಾರ ಬಿಡಿಸಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ಅಪ್ಪು ಬಗ್ಗೆ ಇರುವ ಅಭಿಮಾನವನ್ನ ತೋರಿಸಿದ್ದಾರೆ. ಅಭಿಮಾನಿಗಳ ಭಾವನೆಯ ಜೊತೆ ಆಟವಾಡಬೇಡಿ ಎಂದಿದ್ದಾರೆ.

ಚಾರ್ಲಿ ಚಿಟ್ವೆಂಡೆನ್ ಪ್ಯಾರಾನಾರ್ಮಲ್ ಎಂಬಾತ ತನ್ನ ಯೂಟ್ಯೂಬ್ ನಲ್ಲಿ ಅಪ್ಪು ಆತ್ಮದ ಮಾತಾಡಿದ್ದೇನೆಂದು ಬರೆದುಕೊಂಡಿದ್ದಾನೆ. ವಿಡಿಯೋ ಕೂಡ ಶೇರ್ ಮಾಡಿದ್ದಾನೆ. ಮಕ್ಕಳ ಬಗ್ಗೆ ಕೇಳಿದ್ದು, ಐ ಲವ್ ದೆಮ್ ಎಂದಿದೆ. ಇನ್ನು ಡಾಕ್ಟರ್ ಡಾಕ್ಟರ್ ಎಂಬ ಶಬ್ದವೂ ಕೇಳಿಸುತ್ತಿದೆ. ಇದಕ್ಕೆ ಅಭಿಮಾನಿಗಳು ಚಾರ್ಲಿ ವಿರುದ್ಧ ರೊಚ್ಚಿಗೆದ್ದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *