ರಾಮನಗರ: ತೆರವಾಗಿದ್ದ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಶಿಗ್ಗಾವಿ ಹಾಗೂ ಸಂಡೂರು ಅಷ್ಟಾಗಿ ಸದ್ದು ಮಾಡದೆ ಹೋದರೂ ಚನ್ನಪಟ್ಟಣ ಕ್ಷೇತ್ರ ಮಾತ್ರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದರಲ್ಲೂ ಮೈತ್ರಿ ಪಕ್ಷದ ಅಭ್ಯರ್ಥಿ ಯಾರೆಂಬ ಕುತೂಹಲವೂ ಇದೆ. ಯಾಕಂದ್ರೆ ಚನ್ನಪಟ್ಟಣದ ಅಭ್ಯರ್ಥಿ ನಾನೇ ಎಂದು ಸಿಪಿ ಯೋಗೀಶ್ವರ್ ಹೇಳಿಕೊಂಡು ಓಡಾಡುತ್ತಿದ್ದಾರೆ. ಅತ್ತ ಕುಮಾರಸ್ವಾಮಿ ಅವರು ನೋಡಿದ್ರೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಹೀಗಾಗಿ ಕುತೂಹಲ ಹೆಚ್ಚಾಗಿದೆ. ಇನ್ನು ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಕ್ಷೇತ್ರವಾಗಿರುವ ಕಾರಣ ಅಭ್ಯರ್ಥಿ ಆಯ್ಕೆಯ ಜವಾಬ್ದಾರಿಯನ್ನು ಅವರ ಹೆಗಲಿಗೆ ನೀಡಲಾಗಿದೆ.
ನವಂಬರ್ ನಲ್ಲಿ ಉಪಚುನಾವಣೆ ನಡೆಯಲಿದ್ದು, ಇಂದು ಚನ್ನಪಟ್ಟಣ ಬೈ ಎಲೆಕ್ಷನ್ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡಿದ್ದಾರೆ. ರಾಜಕೀಯದ ಪ್ರಕ್ರಿಯೆಗಳು ಶುರುವಾಗಿದೆ. ಮೂರು ಕ್ಷೇತ್ರದ ಚುನಾವಣೆಗಳು ಇದಾವೆ. ಪಕ್ಷದ ಮುಖಂಡರ ಸಭೆ ಕರೆದಿದ್ದೇನೆ. ಮೂರಿ ವಿಧಾನಸಭಾ ಕ್ಷೇತ್ರದಲ್ಲಿ ಯಾವ ರೀತಿ ನಮ್ಮ ಪಾತ್ರಗಳು ಇರಬೇಕು. ಸಂಡೂರು, ಶಿಗ್ಗಾವಿಯಲ್ಲಿ ಪಾತ್ರ ಕಡಿಮೆ ಇರಬಹುದು. ಆದರೆ ಒಂದೊಂದು ವೋಟು ಇಂಪಾರ್ಟೆಂಟ್ ಇರುತ್ತದೆ. ಹೀಗಾಗಿ ಅಲ್ಲಿನದ್ದು ಚರ್ಚೆ ಮಾಡೋಕೆ ಸೆಲೆಕ್ಟೆಡ್ ಮೆಂಬರ್ಸ್ ನ ಕರೆದಿದ್ದೇನೆ.
ಚನ್ನಪಟ್ಟಣ ಅಲ್ಲಿಯೇ ಇದೆ. ತೀರ್ಮಾನ ಮಾಡೋಣಾ. ಬಿಜೆಪಿಯ ರಾಜ್ಯದ ನಾಯಕರಿಗೂ ನಾನು ಹೇಳಿರುವುದು ಕೂತು ಚರ್ಚೆ ಮಾಡೋಣಾ ಅಂತ. ಚನ್ನಪಟ್ಟಣ ನೀವೂ ಪ್ರತಿನಿಧಿಸುವ ಕ್ಷೇತ್ರ. ನೀವೇ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ದೆಹಲಿಯಲ್ಲಿ ಬಿಟ್ಟಿದ್ದಾರೆ. ನಂಗೆ ಇರುವುದು ಚನ್ನಪಟ್ಟಣದಲ್ಲಿ ಎನ್ಡಿಎ ಅಭ್ಯರ್ಥಿ ಗೆಲ್ಲಬೇಕು ಅಷ್ಟೆ. ಚರ್ಚೆ ಮಾಡ್ತೀನಿ. ದುಡುಕಿ ನಿರ್ಧಾರವನ್ನಂತು ತೆಗೆಸುಕೊಳ್ಳಲ್ಲ ಎಂದಿದ್ದಾರೆ.