ಚನ್ನಪಟ್ಟಣ ಉಪಚುನಾವಣೆ : ಮನೆ, ಮಠ, ಕೋಳಿ, ಮೇಕೆಗಳನ್ನೇ ಅಡವಿಟ್ಟ ಜನ..!

suddionenews
1 Min Read

ಬೆಟ್ಟಿಂಗ್ ದಂಧೆ ಬರೀ ಕ್ರಿಕೆಟ್ ನಲ್ಲಿ ನಡೆಯುವುದಲ್ಲ, ಚುನಾವಣೆಗಳಲ್ಲೂ ನಡೆಯುತ್ತಿದೆ. ಅದರಲ್ಲೂ ಚನ್ನಪಟ್ಟಣ ಉಪಚುನಾವಣೆಯಲ್ಲಿ ಬೆಟ್ಟಿಂಗ್ ದಂಧೆ ಜೋರಾಗಿದೆ. ಸೋಲು ಗೆಲುವಿನ ಲೆಕ್ಕಚಾರದಲ್ಲಿ ಜನ ಮನೆ ಮಠ, ಕುರಿ, ಕೋಳಿಗಳನ್ನ ಅಡವಿಡುತ್ತಿದ್ದಾರೆ. ಸಿ.ಪಿ.ಯೋಗೀಶ್ವರ್ ಅವರಾ..? ನಿಖಿಲ್ ಕುಮಾರಸ್ವಾಮಿ ಅವರಾ..? ನೋಡಿಯೇ ಬಿಡೋಣಾ ಎನ್ನುತ್ತಿದ್ದಾರೆ.

 

ಈ ಬೆಟ್ಟಿಂಗ್ ದಂಧೆ ಬರೀ ಚನ್ನಪಟ್ಟಣದ ವ್ಯಾಪ್ತಿಯಲ್ಲಷ್ಟೇ ನಡೆಯುತ್ತಿಲ್ಲ, ಬದಲಿಗೆ ಅಕ್ಕಪಕ್ಕದ ಜಿಲ್ಲೆಗಳಿಗೂ ವ್ಯಾಪಿಸಿದೆ. ಬುಕ್ಕಿಂಗ್ ಟ್ರೆಂಡ್ ಪ್ರಕಾರ ಸ್ಥಳೀಯರಿಗೆ ಸಿಪಿ. ಯೋಗೀಶ್ವರ್ ಗೆಲ್ಲುವ ಕಂಟೆಸ್ಟೆಂಟ್ ಆಗಿದ್ರೆ ಹೊರಗಿನವರಿಗೆ ನಿಖಿಲ್ ಕುಮಾರಸ್ವಾಮಿ ಆಗಿದ್ದಾರೆ. ಬೆಟ್ಟಿಂಗ್ ಕಟ್ಟುವವರು ಸಹ ರಾಜಕೀಯ, ಮಾಧ್ಯಮ ಹಾಗೂ ಸಮೀಕ್ಷೆಗಳ ಮೂಲವನ್ನು ಪರೀಕ್ಷಿಸಿ, ಗೆಲುವಿನ ಅದೃಷ್ಟದ ಮೇಲೆ ಕೋಟಿ ಕೋಟಿ ಹೂಡಿಕೆ ಮಾಡುತ್ತಿದ್ದಾರೆ. ಹಣ ಮಾತ್ರವಲ್ಲ ತಮ್ಮ ತಮ್ಮ ಜಮೀನುಗಳನ್ನು ಬರೆದಿಡುತ್ತಿದ್ದಾರೆ.

ಚನ್ನಪಟ್ಟಣದಲ್ಲಿ ನೆಕ್ ಟು ನೆಕ್ ಮೂಮೆಂಟ್ ಸ್ಪರ್ಧೆ ಇತ್ತು. ಯಾರೇ ಗೆದ್ದರು ಕೂದಲೆಳೆ ಅಂತರದಲ್ಲಿ ಗೆಲುವು ಕಾಣಲಿದ್ದಾರೆ. ಸಿಪಿ ಯೋಗೀಶ್ವರ್ ಆರಂಭದಿಂದಾನೂ ಗೆಲುವಿನ ಲೆಕ್ಕಚಾರದಲ್ಲಿಯೇ ಇದ್ದರು. ಗೆದ್ದೇ ಗೆಲ್ಲುತ್ತೇನೆಂಬ ಭರವಸೆಯಲ್ಲಿದ್ದರು. ಆದರೆ ಚುನಾವಣೆ ಮುಗಿದ ಬಳಿಕ ಅದ್ಯಾಕೋ ಬೇಸರದ ಮಾತುಗಳನ್ನಾಡಿದ್ದರು. ಜಮೀರ್ ಆಡಿದ್ದ ಕರಿಯಾ ಎಂಬ ಮಾತೇ ಮುಳ್ಳಾಗಬಹುದು ಎಂಬುದು ಹಲವರ ವಾದವಾಗಿದೆ. ಇದರ ನಡುವೆ ಡಿಕೆ ಸುರೇಶ್ ಅವರು ಸೋಲಿನ ಬಗ್ಗೆ ಆಡಿದ ಮಾತಿಗೆ ಕ್ಲಾರಿಟಿ ನೀಡಿದ್ದರು. ಬೆಟ್ಟಿಂಗ್ ಕಟ್ಟಿ ಜನ ಮನೆ, ಮಠ ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ಯೋಗೀಶ್ವರ್ ಸೋಲಿನ ಮಾತುಗಳನ್ನಾಡಿದ್ದರು ಅಷ್ಟೇ ಎಂದಿದ್ದರು. ಇಡೀ ರಾಜ್ಯದ ಜನರೇ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯ ಫಲಿತಾಂಶಕ್ಕಾಗಿ ಕಾಯ್ತಿದೆ.

Share This Article
Leave a Comment

Leave a Reply

Your email address will not be published. Required fields are marked *