ಡಿಕೆಶಿ ಸಿಎಂ ಆಗುವ ಬಗ್ಗೆ ಚನ್ನಗಿರಿ ಶಾಸಕ ಶಾಕಿಂಗ್ ಹೇಳಿಕೆ..!

1 Min Read

ದಾವಣಗೆರೆ: ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗಬೇಕೆಂಬ ಆಸೆ ಎಷ್ಟಿದೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಅದಕ್ಕೆ ಸದ್ಯಕ್ಕೆ ಅವಕಾಶವೇ ಸಿಕ್ತಾ ಇಲ್ಲ. ಇದರ ನಡುವೆ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರು ಕೂಡ ನಮ್ಮ ತಂದೆಯೇ ಐದು ವರ್ಷ ಸಿಎಂ ಅಂತಾರೆ. ಇದಕ್ಕೂ ಡಿಸಿಎಂ ಡಿಕೆ ಶಿವಕುಮಾರ್ ನಾರ್ಮಲ್ ಆಗಿಯೇ ಪ್ರತಿಕ್ರಿಯೆ ನೀಡಿ ಮುಂದೆ ನಡೆದಿದ್ದಾರೆ. ಇಷ್ಟೆಲ್ಲ ಗೊಂದಲ ಇರುವ ಕಾರಣಕ್ಕಾಗಿಯೇ ಕಾಂಗ್ರೆಸ್ ನಾಯಕರು ಹೈಕಮಾಂಡ್ ಮಧ್ಯ ಪ್ರವೇಶ ಮಾಡಬೇಕೆಂದು ಮನವಿ ಮಾಡಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಯನ್ನ ಬಗೆಹರಿಸಿ ಅಂತಾನು ಹೇಳಿಕೊಂಡಿದ್ದಾರೆ. ಇದರ‌ ನಡುವೆ ಚನ್ನಗಿರಿ ಶಾಸಕ ಬಸವರಾಜ್ ಶಿವಗಂಗಾ ಶಾಕಿಂಗ್ ಹೇಳಿಕೆಯನ್ನ ನೀಡಿದ್ದಾರೆ. ಅಧಿಕಾರ ಹಂಚಿಕೆಗೆ ಸಂಬಂಧಿಸಿದಂತೆ ಈಗಾಗಲೇ ಒಪ್ಪಂದ ಆಗಿದೆ ಎಂಬುದನ್ನ ಹೇಳಿದ್ದಾರೆ.

ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಕಾಂಗ್ರೆಸ್ ನ ಎಲ್ಲಾ 139 ಬಹುತೇಕ ಶಾಸಕರ ಬೆಂಬಲವಿದೆ. ಇದಕ್ಕೂ ಮೀರಿ ನಮ್ಮಂತಹ 40-50 ಯುವ ಶಾಸಕರು ಡಿಕೆಶಿ ಏನೇ ಹೇಳಿದರೂ ಮಾಡುವುದಕ್ಕೆ ಸಿದ್ಧರಿದ್ದೇವೆ ಎಂದಿದ್ದಾರೆ.

ಅಷ್ಟೇ ಅಲ್ಲ ಅದಕ್ಕೂ ಮೀರಿ ಪ್ರಾಣ ಕೊಡುವುದಕ್ಕೂ ಸಿದ್ಧ ಎಂಬ ಮಾತನ್ನ ಹೇಳಿದ್ದಾರೆ. ಅಧಿಕಾರ ಹಂಚಿಕೆ ಆಗಿರುವ ಬಗ್ಗೆ ನನಗೆ ಸ್ಪಷ್ಟ ಮಾಹಿತಿ ಇದೆ. ಈ ಸಂಬಂಧ ಹೈಕಮಾಂಡ್ ಸ್ಪಷ್ಟನೆ ನೀಡಬೇಕು ಅಷ್ಟೇ. ಯತೀಂದ್ರ ಸಿದ್ದರಾಮಯ್ಯ ಅವರ ಹೇಳಿಕೆಯೂ ಚರ್ಚೆಗೆ ಕಾರಣವಾಗಿದೆ. ಇದರ ಬಗ್ಗೆಯೂ ಹೈಕಮಾಂಡ್ ನಿರ್ಧಾರ ಮಾಡಬೇಕಿದೆ ಎಂದಿದ್ದಾರೆ.

Share This Article
Enable Notifications OK No thanks