Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಂದ್ರಯಾನ-3 : ಆಗಸ್ಟ್ 23 ರ ಬದಲಾಗಿ 27 ಕ್ಕೆ ಮುಂದೂಡಲಾಗುತ್ತಾ ? ಕಾರಣವೇನು ?

Facebook
Twitter
Telegram
WhatsApp

 

ಸುದ್ದಿಒನ್

ಚಂದ್ರನ ಮೇಲಿನ ಅಧ್ಯಯನಕ್ಕೆ ಇಸ್ರೋ ಕೈಗೊಂಡಿರುವ ಅತ್ಯಂತ ಪ್ರತಿಷ್ಠಿತವಾದ ಚಂದ್ರಯಾನ-3 (ಚಂದ್ರಯಾನ-3) ಲ್ಯಾಂಡಿಂಗ್‌ಗೆ ಕ್ಷಣಗಣನೆ ಆರಂಭವಾಗಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಅನ್ನು ಸಾಫ್ಟ್ ಲ್ಯಾಂಡಿಂಗ್ ಮಾಡಲು ಇಸ್ರೋ ತೀವ್ರ ಕಸರತ್ತು ನಡೆಸುತ್ತಿದೆ. ಈ ನಿಟ್ಟಿನಲ್ಲಿ, ಲ್ಯಾಂಡರ್ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಸೂಕ್ತವಾದ ಸ್ಥಳವನ್ನು ಹುಡುಕಲು ಪ್ರಾರಂಭಿಸಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ 23ರ ಸಂಜೆ 5.45ಕ್ಕೆ ಲ್ಯಾಂಡಿಂಗ್ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 6.04ಕ್ಕೆ ವಿಕ್ರಮ್ ಚಂದ್ರನ ಮೇಲ್ಮೈ ಸ್ಪರ್ಶಿಸಲಿದೆ. ಆದರೆ,ಒಂದು ವೇಳೆ ಯಾವುದೇ ಪ್ರತಿಕೂಲ ಪರಿಸ್ಥಿತಿ ಎದುರಾದರೆ ಇಸ್ರೋ ಪ್ಲಾನ್ ‘ಬಿ’ ಯೋಜನೆಯನ್ನೂ ಸಿದ್ಧಪಡಿಸಿಕೊಂಡಿದೆ.

ಲ್ಯಾಂಡರ್ ಮಾಡ್ಯೂಲ್‌ಗೆ ಸಂಬಂಧಿಸಿದಂತೆ ಒಂದು ವೇಳೆ ಪ್ರತಿಕೂಲವಾದ ಪರಿಣಾಮ ಎದುರಾದರೆ ಲ್ಯಾಂಡಿಂಗ್ ಅನ್ನು ಆಗಸ್ಟ್ 27 ಕ್ಕೆ ಮುಂದೂಡಲಾಗುತ್ತದೆ ಎಂದು ಇಸ್ರೋ ಹಿರಿಯ ವಿಜ್ಞಾನಿ ಅಹಮದಾಬಾದ್‌ನ ಇಸ್ರೋ ಬಾಹ್ಯಾಕಾಶ ಅಪ್ಲಿಕೇಶನ್ ಕೇಂದ್ರದ (ಎಸ್‌ಎಸಿ) ನಿರ್ದೇಶಕ ನಿಲೇಶ್ ಎಂ. ದೇಸಾಯಿ ಈ ವಿಷಯವನ್ನು ತಿಳಿಸಿದ್ದಾರೆ.

ಮಾಡ್ಯೂಲ್‌ನ ಸ್ಥಿತಿ ಮತ್ತು ಚಂದ್ರನ ಮೇಲಿನ ಹವಾಮಾನಕ್ಕೆ ಸಂಬಂಧಿಸಿದ ಪ್ರತಿಕೂಲ ಪರಿಸ್ಥಿತಿಗಳನ್ನು ಅವಲಂಬಿಸಿ ಲ್ಯಾಂಡಿಂಗ್ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ಎಎನ್‌ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆಗಸ್ಟ್ 23 ರಂದು ಚಂದ್ರನ ಮೇಲ್ಮೈಗೆ ಇಳಿಯುವ ಎರಡು ಗಂಟೆಗಳ ಮೊದಲು, ಲ್ಯಾಂಡರ್‌ನ ಸ್ಥಿತಿ ಮತ್ತು ಚಂದ್ರನ ಮೇಲಿನ ವಾತಾವರಣದ ಸ್ಥಿತಿಯನ್ನು ನಿರ್ಣಯಿಸಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ.  ವಿಕ್ರಮ್ ಇಳಿಯಲು ಪರಿಸ್ಥಿತಿಗಳು ಸೂಕ್ತವಾಗಿಲ್ಲದಿದ್ದರೆ ನಾವು ಲ್ಯಾಂಡಿಂಗ್ ಅನ್ನು ಆಗಸ್ಟ್ 27 ಕ್ಕೆ ಮುಂದೂಡುತ್ತೇವೆ. ಆದರೆ ನಾವು ಯಾವುದೇ ತೊಂದರೆಯಿಲ್ಲದೆ ಯೋಜಿಸಿದಂತೆ ಆಗಸ್ಟ್ 23 ರಂದು ನಾವು ಲ್ಯಾಂಡರ್ ಅನ್ನು ಚಂದ್ರನ ಮೇಲೆ ಇಳಿಸುತ್ತೇವೆ ಎಂದು ಅವರು ಹೇಳಿದರು.

2019 ರಲ್ಲಿ ಇಸ್ರೋದ ಚಂದ್ರಯಾನ-2 ಕೊನೆಯ ಕ್ಷಣದಲ್ಲಿ ವಿಫಲವಾದ ನಂತರ, ಇಸ್ರೋ ಈ ಬಾರಿ ಅಂತಹ ಯಾವುದೇ ತಪ್ಪುಗಳು ನಡೆಯದಂತೆ ತೀವ್ರ ಮುಂಜಾಗ್ರತಾ ಕ್ರಮಗಳನ್ನು ಇಸ್ರೋ ಕೈಗೊಂಡಿದೆ.  ಲ್ಯಾಂಡರ್ ಅನ್ನು ಯಾವುದೇ ಪರಿಸ್ಥಿತಿಗಳಲ್ಲಿ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಲು ವಿನ್ಯಾಸಗೊಳಿಸಲಾಗಿದೆ.

ಅಲ್ಗಾರಿದಮ್ ವೈಫಲ್ಯ, ನಿಯಂತ್ರಣ ಸಮಸ್ಯೆಗಳಿಂದ ಚಂದ್ರಯಾನ-2 ವಿಫಲವಾಗಿದೆ. ಈ ಕುರಿತು ಬೆಂಗಳೂರಿನಲ್ಲಿರುವ ಐಐಎಸ್‌ಸಿ ಏರೋಸ್ಪೇಸ್ ವಿಜ್ಞಾನಿ ಪ್ರೊಫೆಸರ್ ರಾಧಾಕಾಂತ್ ಪಾಧಿ.. ‘ವಿಕ್ರಮ್ ಲ್ಯಾಂಡರ್‌ನ ಕಾಲುಗಳು ಈಗ ಬಲವಾಗಿವೆ’ ಎಂದು ಹೇಳಿದ್ದಾರೆ. “ಚಂದ್ರಯಾನ-3 ಅನ್ನು ‘ಸಿಕ್ಸ್ ಸಿಗ್ಮಾ’ ಆಧಾರದ ಮೇಲೆ ವಿನ್ಯಾಸಗೊಳಿಸಲಾಗಿದೆ.‌ ಇದು ಹೆಚ್ಚು ದೃಢವಾದ ರಚನೆಯಾಗಿದ್ದು ಎಲ್ಲಾ ಪರಿಸ್ಥಿತಿಗಳನ್ನು ತಡೆದುಕೊಳ್ಳುವಂತೆ ಲ್ಯಾಂಡರ್ ಅನ್ನು ವಿನ್ಯಾಸಮಾಡಲಾಗಿದೆ.

ಇದೇ ಸಮಯದಲ್ಲಿ ಸುಮಾರು 50 ವರ್ಷಗಳ ನಂತರ ರಷ್ಯಾದ ಮಹತ್ವಾಕಾಂಕ್ಷೆಯ ‘ಲೂನಾ-25’ ಕೊನೆಯ ಮೆಟ್ಟಿಲೇರಿದೆ.  ಚಂದ್ರನ ಅಂತಿಮ ಕಕ್ಷೆಗೆ ಲ್ಯಾಂಡರ್ ಅನ್ನು ಚಲಿಸುವಾಗ ತಾಂತ್ರಿಕ ದೋಷದಿಂದ ಲ್ಯಾಂಡರ್ ಪತನಗೊಂಡಿತ್ತು. ಈ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳು ಯಾವುದೇ ರೀತಿಯ ತೊಂದರೆಗಳು ‌ಎದುರಾಗದಂತೆ ಮತ್ತಷ್ಟು ಕಸರತ್ತು ನಡೆಸಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Curry Leaves Juice : ಕರಿಬೇವಿನ ಜ್ಯೂಸ್ ಕುಡಿಯುವುದರಿಂದ ಆಗುವ ಲಾಭಗಳೇನು ?

ಸುದ್ದಿಒನ್ : ಅಡುಗೆಯಲ್ಲಿ ಕರಿಬೇವಿನ ಸೊಪ್ಪನ್ನು ಸಾಮಾನ್ಯವಾಗಿ ಬಳಸುತ್ತೇವೆ. ವಿವಿಧ ರೀತಿಯ ಅಡುಗೆಗೆ ಅವಶ್ಯವಾಗಿ ಬಳಸಲಾಗುತ್ತದೆ. ಕರಿಬೇವಿನ ಎಲೆಗಳನ್ನು ಹಾಕುವುದರಿಂದ ಉತ್ತಮ ರುಚಿ ಮತ್ತು ಪರಿಮಳ ಹೆಚ್ಚುತ್ತದೆ. ರುಚಿ ಮತ್ತು ವಾಸನೆ ಮಾತ್ರವಲ್ಲದೆ ತುಂಬಾ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ

ಈ ರಾಶಿಯ ಗುತ್ತಿಗೆದಾರರಿಗೆ ಹೊಸ ಟೆಂಡರ್ ಹಾಗೂ ಹಳೆ ಬಾಕಿ ಅತಿ ಶೀಘ್ರದಲ್ಲಿ ಪಡೆಯಲಿದ್ದೀರಿ, ಈ ರಾಶಿಯವರು ಆಸ್ತಿ ಉಡುಗೊರೆಯಾಗಿ ಪಡೆಯುವಿರಿ, ಶನಿವಾರ ರಾಶಿ ಭವಿಷ್ಯ -ಜುಲೈ-27,2024 ಸೂರ್ಯೋದಯ: 05:58, ಸೂರ್ಯಾಸ್ತ : 06:47

error: Content is protected !!