ಹಿಟ್ ಅಂಡ್ ರನ್ ಕೇಸಲ್ಲಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಚಂದ್ರಪ್ರಭ : ಅಷ್ಟಕ್ಕೂ ಚಿಕ್ಕಮಗಳೂರಲ್ಲಿ ಏನಾಯ್ತು..?

suddionenews
1 Min Read

 

ಚಿಕ್ಕಮಗಳೂರು: ಇತ್ತಿಚೆಗೆ ಚಿಕ್ಕಮಗಳೂರಿನಲ್ಲಿ ಅಪಘಾತವೊಂದು ನಡೆದಿದೆ. ಅದರಲ್ಲಿ ಬೈಕ್ ಒಂದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು, ಆ ಕಾರು ಗಿಚ್ಚಿ ಗಿಲಿಗಿಲಿ‌ ಖ್ಯಾತಿಯ ಚಂದ್ರಪ್ರಭರಿಗೆ ಸೇರಿದ್ದು ಎನ್ನಲಾಗ್ತಾ ಇದೆ.

ಆದ್ರೆ ಅಪಘಾತವಾದ ಮೇಲೂ ಬಿದ್ದ ವ್ಯಕ್ತಿಯನ್ನು ನೋಡದೆ, ಕಾರು ಮುಂದೆ ಸಾಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮಾನವೀಯತೆ ಇಲ್ಲದೆ ನಡೆದುಕೊಂಡಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಚಿಕ್ಕಮಗಳೂರು ನಗರದ ಸಮೀಪ ಈ ಘಟನೆ ನಡೆದಿದೆ.

ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬುವವರು ಬಟ್ಟೆ ಅಂಗಡಿಯಲ್ಲಿ ಕೆಲಸ ಮುಗಿಸಿ, ವಾಪಾಸ್ಸು ಬರುತ್ತಿದ್ದರು. ಈ ವೇಳೆ ಮಾಲ್ತೇಶ್ ಬೈಕ್ ಗೆ ಕಾರು ಡಿಕ್ಕಿ ಹೊಡೆದಿದೆ. ಮಾಲ್ತೇಶ್ ಅ ರನ್ನು ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಆದ್ರೆ ಅಪಘಾತ ಮಾಡಿದ ನಂತರ ಕಾರು ಚಾಲಕ ಏನಾಗಿದೆ ಎಂದು ತಿರುಗಿಯೂ ನೋಡಿಲ್ಲ.

ಈ ಘಟನೆಯ ಸಿಸಿಟಿವಿ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅಪಘಾತ ಮಾಡಿದ ಕಾರು ಚಂದ್ರಪ್ರಭ ಅವರಿಗೆ ಸೇರಿದ್ದು ಎನ್ನಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆಗೆ ಮುಂದಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *