ಚಿತ್ರದುರ್ಗ: ತಾಲ್ಲೂಕಿನ ಬಾಗೇನಾಳು ಗ್ರಾಮದಲ್ಲಿ ಚಂದ್ರಮೌಳೇಶ್ವರಸ್ವಾಮಿ ರಥೋತ್ಸವ ಅದ್ದೂರಿಯಾಗಿ ನಡೆಯಿತು.
ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ರಥೋತ್ಸವಕ್ಕೆ ಚಾಲನೆ ನೀಡಿದರು.
ಬಾಗೇನಾಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ರಥೋತ್ಸವದಲ್ಲಿ ಪಾಲ್ಗೊಂಡು ಚಂದ್ರಮೌಳೇಶ್ವರಸ್ವಾಮಿಗೆ ಭಕ್ತಿ ಸಮರ್ಪಿಸಿದರು.
ಚಂದ್ರಮೌಳೇಶ್ವರಸ್ವಾಮಿಯ ರಥದ ಮುಕ್ತಿ ಭಾವುಟವನ್ನು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಪ್ರಧಾನ ಕಾರ್ಯದರ್ಶಿ ಓಬಳೇಶ್ ಟಿ. ಇವರು ಒಂದು ಲಕ್ಷ ಒಂದು ಸಾವಿರದ ನೂರ ಒಂದು ರೂ.ಗಳಿಗೆ ಪಡೆದುಕೊಂಡರು.
ಜಿ.ಟಿ.ಬಾಬುರೆಡ್ಡಿ, ಕೂನಬೇವು ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್, ಉಪಾಧ್ಯಕ್ಷೆ ಬೋರಮ್ಮ, ಬಾಗೇನಾಳು ಗ್ರಾಮದ ಮುಖಂಡರುಗಳಾದ ಎಸ್.ಆರ್.ತಿಪ್ಪೇಸ್ವಾಮಿ, ತಿಪ್ಪೇರುದ್ರಪ್ಪ, ಮಂಜುನಾಥ್, ಮೈಲಾರಪ್ಪ, ನಾಗರಾಜು, ಕೊಂಡಳ್ಳಿರ ತಿಪ್ಪೇಸ್ವಾಮಿ, ಚಿಕ್ಕಜಗಲೂರು ಮಹಂತೇಶ್, ಉಮೇಶ್, ಬಿ.ಟಿ.ಗುರುಮೂರ್ತಿ, ವಿಷ್ಣು, ಕಾಕಿಹನುಮಂತರೆಡ್ಡಿ ಇನ್ನು ಮುಂತಾದವರು ರಥೋತ್ಸವಲ್ಲಿ ಪಾಲ್ಗೊಂಡಿದ್ದರು.