ಬೆಂಗಳೂರು: ಕಳೆದ ಮೂರು ದಿನಗಳಿಂದ ರಾಜ್ಯದಲ್ಲಿ ಮಳೆಯ ಆರಂಭವಾಗಿದೆ. ಹಲವೆಡೆ ಈಗಾಗಲೇ ಜೋರು ಮಳೆಯಾಗಿದೆ. ಮಳೆಯಾಗುತ್ತಲೇ ಇದೆ. ರಾಜ್ಯದಲಿ ಇನ್ನು ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಂದ್ರೆ ಮೇ 6ರ ತನಕ ರಾಜ್ಯದಲ್ಲಿ ಮಳೆಯಾಗಲಿದೆ.
ನಿನ್ನೆಯೆಲ್ಲಾ ಮಳೆಯಾಗಿದ್ದು, ನಗರ ಪ್ರದೇಶ, ತಗ್ಗು ಪ್ರದೇಶದಲ್ಲಿ ನೀರು ನಿಂತಿತ್ತು. ಜೋರು ಮಳೆಯಾದ ಕಾರಣ ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ನಗರದಲ್ಲಿ ಮೋಡ ಕವಿದ ವಾತಾವರಣ ಇರುವ ಕಾರಣ ಕೆಲವೆಡೆ ರಾತ್ರಿ ಸಮಯದಲ್ಲಿ ಮಳೆಯಾಗಲಿದೆ.
ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರ ಜೊತೆಗೆ ಆಗ್ನೇಯ ಬಂಗಾಳ ಕೊಲ್ಲಿಯಲ್ಲಿ ವರ್ಷದ ಮೊದಲ ಚಂಡ ಮಾರುತ ಮೋಚಾ ಎದುರಾಗಲಿದ್ದು, ಇದರ ಎಫೆಕ್ಟ್ ರಾಜ್ಯದ ಮೇಲೂ ಆಗಲಿದೆ ಎನ್ನಲಾಗಿದೆ.