ಮೈಸೂರು: ತಾಯಿ ಚಾಮುಂಡಿ ನೋಡಲು ನಿತ್ಯವೂ ನೂರಾರು ಜನ ಭೇಟಿ ನೀಡುತ್ತಾರೆ. ವೀಕೆಂಡ್ ನಲ್ಲಿ ಸಾವಿರಾರು ಭಕ್ತರು ಬೆಟ್ಟಕ್ಕೆ ಬರ್ತಾರೆ. ಅದರಲ್ಲಿ ಸಾಕಷ್ಟು ಜನ ಬೆಟ್ಟ ಹತ್ತುವ ಹರಕೆ ಮಾಡಿಕೊಂಡಿರುತ್ತಾರೆ. ಇನ್ನು ಒಂದಷ್ಟು ಜನ ಟೈಮ್ ಪಾಸ್ ಗೂ ಬೆಟ್ಟ ಹತ್ತುತ್ತಾರೆ. ಆದರೆ ನಿನ್ನೆ ಬೆಟ್ಟದಲ್ಲಿ ಇದ್ದಕ್ಕಿದ್ದ ಹಾಗೇ ಬೆಂಕಿ ಕಾಣಿಸಿಕೊಂಡಿತ್ತು. ನೋಡನೋಡುತ್ತಲೇ ಎಕರೆಗಟ್ಟಲೇ ಬೆಂಕಿ ರಾಚಿಕೊಂಡಿದೆ. ನಿನ್ನೆಯಿಂದಾನೂ ಬೆಂಕಿ ನಂದಿಸಲು ಅಗ್ನಿಶಾಮಕ ದಳದವರು ಶ್ರಮ ಪಟ್ಟಿದ್ದಾರೆ.

ಈ ಸಂಬಂಧ ಡಿಸಿಎಫ್ ಬಸವರಾಜು ಅವರು ಸುದ್ದಿಗೋಷ್ಠಿ ನಡೆಸಿ, ಮಾಹಿತಿ ನೀಡಿದ್ದಾರೆ. ನಿನ್ನೆ ಚಾಮುಂಡಿ ಬೆಟ್ಟಕ್ಕೆ ಮಾನವ ನಿರ್ಮಿತ ಬೆಂಕಿ ಹೊತ್ತಿತ್ತು. ಉದ್ದೇಶ ಪೂರ್ವಕವಾಗಿ ಕಾಡಿಗೆ ಬೆಂಕಿ ಹಾಕಿದ್ದಾರೆ. ಇದು ಆಕಸ್ಮಿಕವಲ್ಲ ಎಂದು ಆರೋಪಗಳು ಕೇಳಿ ಬಂದಿವೆ. ಆ ಬಗ್ಗೆ ತನಿಖೆ ನಡೆಯುತ್ತಿದೆ. ಬೆಂಕಿ ಬಿದ್ದ ಸಮಯಕ್ಕೆ ಗಾಳಿಯ ವೇಗ ಹಾಗೂ ಬಿಸಿಲಿನ ತಾಪಮಾನ ಹೆಚ್ಚಾಗಿತ್ತು. ಹೀಗಾಗಿ ಬೆಂಕಿ ನಂದಿಸಲು ಕಷ್ಟವಾಗಿದೆ. ನಾವೂ ಎಷ್ಟೇ ಪ್ರಯತ್ನ ಪಟ್ಟರು ಕೆಲವೊಂದಿಷ್ಟು ಜಾಗಕ್ಕೆ ಹೋಗುವುದಕ್ಕೆ ಆಗಲಿಲ್ಲ. ಅಗ್ನಿಶಾಮಕ ದಳ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಬೆಂಕಿ ನಂದಿಸುವುದಕ್ಕೆ ಶ್ರಮ ಹಾಕಿದರು.

ಬೆಂಕಿಯ ಹೆಚ್ಚಾಗಿದ್ದ ಕಾರಣ ಸಂಜೆ ವೇಳೆಗೆ ಬೆಂಕಿಯನ್ನ ನಂದಿಸಲಾಗಿದೆ. ಮೂರು ತಂಡಗಳ ಜೊತೆಗೆ ವಾಚರ್ ಗಳನ್ನು ಬಿಟ್ಟು ರಾತ್ರಿ ಇಡೀ ಕಾದಿದ್ದೇವೆ. ಬೆಳಗ್ಗೆ ಕೂಡ ಎರಡು ತಂಡಗಳನ್ನ ಮಾಡಿ ಮಾನಿಟರ್ ಮಾಡಲಾಗಿದೆ. ದೇವಿಕೆರೆ, ಗೊಲ್ಲಹಳ್ಳ ಭಾಗದಲ್ಲಿ 35 ಎಕರೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ನಾಲ್ಕು ಕಡೆಯಿಂದ ಬೆಟ್ಟಕ್ಕೆ ಬರಲು ದಾರಿ ಇದೆ. ನಮ್ಮ ಮನವಿ ಏನೆಂದರೆ ದಯವಿಟ್ಟು ಬೀಡಿ, ಸಿಗರೇಟು ಸೇದಿ ಬೆಟ್ಟಕ್ಕೆ ಎಸೆಯಬೇಡಿ ಎಂದಿದ್ದಾರೆ.

