ಬೆಂಗಳೂರು ಅರಮನೆಯ ಜಾಗದ ವಿಚಾರಕ್ಕೆ ಸರ್ಕಾರ ಹಾಗೂ ರಾಜವಂಶಸ್ಥರ ನಡುವೆ ಕಾನೂನಾತ್ಮಕ ಹೋರಾಟ ನಡೆಯುತ್ತಿದೆ. ರಸ್ತೆ ಅಗಲೀಕರಣಕ್ಕಾಗಿ ಸರ್ಕಾರ ಅರಮನೆ ಜಾಗ ಬಳಸಿಕೊಳ್ಳಬೇಕು ಅಂದ್ರೆ 3,300 ಕೋಟಿ ಟಿಡಿಆರ್ ಅನ್ನ ರಾಜವಂಶಸ್ತರಿಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಹಿಂದಿನ ಸರ್ಕಾರ ಇದಕ್ಕೆ ಒಪ್ಪಿರಲಿಲ್ಲ. ಕಾಂಗ್ರೆಸ್ ಸರ್ಕಾರ ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಮಾಡಿದೆ ಟಿಡಿಆರ್ ಡೆಪಾಸಿಟ್ ಮಾಡಲು ನಿರ್ಧರಿಸಿದೆ. ಇದರ ನಡುವೆ ಬಿಜೆಪಿ ನಾಯಕ ಅರವಿಂದ್ ಬೆಲ್ಲದ್ ಸರ್ಕಾರದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.

ಬೆಂಗಳೂರು ಅರಮನೆ ಜಾಗ ಮೈಸೂರು ರಾಜವಂಶಕ್ಕೆ ಸೇರಿದ್ದು. ಬ್ರಿಟಿಷರಿಗೆ ಮಾದರಿಯಾಗಿ ಆಡಳಿತ ನಡೆಸಿದವರು ಮೈಸೂರು ರಾಜವಂಶಸ್ಥರು. ನಮ್ಮಲ್ಲೂ ಅಂತಹ ಆಡಳಿತ ಬರಬೇಕೆಂದು ಬಯಸಿದವರು. ಉತ್ತರ ಕರ್ನಾಟಕದ ನಮ್ಮವರು ಅದರ ಭಾಗವಾಗಬೇಕೆಂದು ಬಯಸಿದವರು. ಅಂತ ಮಹಾರಾಜರ ವಂಶದ ತಂಟೆಗೆ ಹೋದ್ರೆ ತಾಯಿ ಚಾಮುಂಡಿ ಸುಮ್ಮನೆ ಬಿಡಲ್ಲ ಶಾಪ ಹಾಕ್ತಾಳೆ.

ಸರ್ಕಾರ ಮಹಾರಾಜರ ಕುಟುಂಬದ ಜೊತೆಗೆ ವೈಷಮ್ಯದ ರಾಜಕಾರಣ ಮಾಡ್ತಿದೆ. ಮೈಸೂರು ಮಹಾರಾಜರ ತ್ಯಾಗವನ್ನ ಸ್ಮರಿಸಬೇಕಿದೆ. ಟಿಡಿಆರ್ ಕೊಡೋದ್ರಿಂದ ಸರ್ಕಾರಕ್ಕೇನು ನಷ್ಟ ಆಗೋದಿಲ್ಲ. ಟಿಡಿಆರ್ ಅಂದ್ರೆ ಅಭಿವೃದ್ಧಿ ಹಕ್ಕುಗಳ ವರ್ಗಾವಣೆ ಇದ್ದಂತೆ. ಹಣ ಕೊಡೋದಲ್ಲ. ಅದು ಹಕ್ಕುಗಳ ವರ್ಗಾವಣೆ ಅಷ್ಟೇ ಎಂದು ಸದನದಲ್ಲಿ ಮಹಾರಾಜರ ಪರವಾಗಿ ನಿಂತರು. ಇದಕ್ಕರ ಸದನದಲ್ಲಿಯೇ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದರು. ಸದ್ಯ ಬೆಂಗಳೂರು ಅರಮನೆ ಜಾಗವನ್ನ ಪಡೆದು ರಸ್ತೆ ಅಗಲೀಕರಣ ಮಾಡಬೇಕೆಂದು ಸರ್ಕಾರ ಅಂದುಕೊಂಡಿದೆ. ಇದರಿಂದ ಬಳ್ಳಾರಿಗೆ ಹೋಗುವ ರಸ್ತೆ ಮಾರ್ಗದಲ್ಲಿ ಟ್ರಾಫಿಕ್ ತಪ್ಪಿಸಬಹುದೆಂಬ ಉದ್ದೇಸದವಾಗಿದೆ.

