ಭಾರತೀಯ ಕ್ರಿಜೆಟ್ ಪ್ರಿಯರು ಮತ್ತೊಂದು ಐಸಿಸಿ ಟ್ರೋಫಿ ಗೆಲುವನ್ನು ಎದುರು ನೋಡ್ತಿದ್ದಾರೆ. ಈಗಾಗಲೇ ಮಹತ್ವದ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೆ ಟೀಂ ಇಂಡಿಯಾ ಅನೌನ್ಸ್ ಅಗಿದೆ. ಆದರೆ ಈಗ ಇರುವ ತಲೆ ನೋವು ಅಂದ್ರೆ ಬೌಲಿಂಗ್ ಸಮಸ್ಯೆಯದ್ದೇ ಟೀಂ ಇಂಡಿಯಾಗೆ ದೊಡ್ಡ ತಲೆನೋವಾಗಿದೆ. ಟೀಂ ಇಂಡಿಯಾಗೆ ಬೌಲಿಂಗ್ ನಲ್ಲಿ ಗೆಲ್ಲುವ ಸಾಮರ್ಥ್ಯ ಇದ್ಯಾ ಎಂಬ ಚರ್ಚೆಗಳು ನಡೆಯುತ್ತಿವೆ. ಅಳೆದು ತೂಗೋ ಆತುರದಲ್ಲಿ ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಮೊಹಮ್ಮದ್ ಸಿರಾಜ್ ಗೆ ಮೋಸ ಮಾಡೀತಾ ಎಂಬ ಚರ್ಚೆಗಳು ನಡೆಯುತ್ತಿವೆ.
ಸದ್ಯಕ್ಕೆ ಬಲಿಷ್ಠ ತಂಡವನ್ನ ಕಮಿಟಿ ಆಯ್ಕೆ ಮಾಡಿದೆ. ಆದ್ರೆ ಆನ್ ಫೀಲ್ಡ್ ನಲ್ಲಿ ಅಷ್ಟೇ ಸ್ಟ್ರಾಂಗ್ ಆಗಿ ಆಡಲಿದ್ಯಾ ಎಂಬ ಪ್ರಶ್ನೆ ಎದುರಾಗಿದೆ. ಬ್ಯಾಟಿಂಗ್ ಒಕೆ ಆದ್ರೆ ಬೌಲಿಂಗ್ ನದ್ದೇ ಸಮಸ್ಯೆಯಾಗಿದೆ. ಯುವ ಎಡಗೈ ವೇಗಿ ಅರ್ಷ್ ದೀಪ್ ಸಿಂಗ್ ಜೊತೆಗೆ, ಮೊಹಮ್ಮದ್ ಶಮಿ, ಜಸ್ ಪ್ರೀತ್ ಬೂಮ್ರಾ ಟೀಂ ಇಂಡಿಯಾದಲ್ಲಿರೋ ವೇಗಿಗಳಾಗಿದ್ದಾರೆ. 2023ರಲ್ಲಿ ಇಂಜೂತಿಗೆ ಒಳಗಾಗಿದ್ದ ಶಮಿ ಇಲ್ಲಿವರೆಗೂ ಒಂದೇ ಒಂದು ಇಂಟರ್ ನ್ಯಾಷನಲ್ ಪಂದ್ಯವನ್ನಾಡಿಲ್ಲ. ದೇಶಿ ಕ್ರಿಕೆಟ್ ಗೆ ಕಮ್ ಬ್ಯಾಕ್ ಮಾಡಿದ್ರು, ಆಗಲೂ ಇಂಜುರಿ ಸಮಸ್ಯೆಯಿಂದ ಹೊರಗೆ ಉಳಿದ ಶಮಿ, ಈಗ ಬೇಕಾ ಎಂಬ ಪ್ರಶ್ನೆ ಎದುರಾಗಿದೆ.
ಬೂಮ್ರಾ, ಶಮಿ ಇಬ್ಬರ ಫಿಟ್ನೆಸ್ ಬಗ್ಗೆ ಸದ್ಯಕ್ಕೆ ಮಾಹಿತಿಯಿಲ್ಲ. ಹೀಗಿದ್ರೂ ತಂಡದ ಪ್ರೀಮಿಯಂ ವೇಗಿ ಮೊಹ್ಮದ್ ಸಿರಾಜ್ನ ಕಡೆಗಣಿಸಿದ್ದು ಸರೀನಾ ಅನ್ನೋದು ಸದ್ಯ ಎದುರಾಗಿರೋ ಪ್ರಶ್ನೆಯಾಗಿದೆ. ಟೀಂ ಇಂಡಿಯಾ ಗೆಲುವಿಗಾಗಿ ಕಷ್ಟಪಡಬೇಕಾಗುತ್ತಾ ಎಂಬುದು ಅಭಿಮಾನಿಗಳ ಪ್ರಶ್ನೆ.