ಸಿದ್ದರಾಮಯ್ಯನವರಿಗೆ ಅತಿಹೆಚ್ಚು ಅಲ್ಪಸಂಖ್ಯಾತ ಮತಗಳಿರುವ ಚಾಮರಾಜಪೇಟೆ ಸೂಕ್ತ : ಬಿಜೆಪಿ

1 Min Read

 

ಬೆಂಗಳೂರು: ಕುಂಕುಮಧಾರಿಗಳನ್ನು ಕಂಡರೇ ಭಯಪಡುವ @siddaramaiah ನವರಿಗೆ ತಾಯಿ ಚಾಮುಂಡೇಶ್ವರಿಯನ್ನು ಕಂಡರೆ ಅದಿನ್ನೆಷ್ಟು ಭಯವಿರಬೇಡ ಪಾಪ. ಹಾಗಾಗಿ ಕ್ಷೇತ್ರದ ಹುಡುಕಾಟದಲ್ಲಿರುವ ಅವರಿಗೆ ಸಮಸ್ತ ಕರ್ನಾಟಕದಲ್ಲಿ ಸುಲಭ ಗೆಲುವಿಗೆ ಇರುವುದು ಅತಿಹೆಚ್ಚು ಅಲ್ಪಸಂಖ್ಯಾತ ಮತಗಳಿರುವ ಚಾಮರಾಜಪೇಟೆ ಕ್ಷೇತ್ರ ಮಾತ್ರ ಎಂದು ಟ್ವೀಟ್ ಮಾಡಿ ವ್ಯಂಗ್ಯ ಮಾಡಿದೆ ಬಿಜೆಪಿ.

ಚುನಾವಣಾ ಅಕ್ರಮವೆಸಗಿ ಆರು ವರ್ಷ ಅಲಹಾಬಾದ್ ಹೈಕೋರ್ಟ್‌ನಿಂದ ಇಂದಿರಾ ಗಾಂಧಿ ಶಿಕ್ಷೆಗೆ ಒಳಪಟ್ಟಿದ್ದರು. ಚುನಾವಣಾ ಅಕ್ರಮವೆಸಗಿ ದೇಶದ ಮೇಲೆ ಕಾಂಗ್ರೆಸ್ ತುರ್ತು ಪರಿಸ್ಥಿತಿ ಹೇರಿತ್ತು. ಮಾನ್ಯ @siddaramaiah ಅವರೇ, ಈ ಚುನಾವಣಾ ಅಕ್ರಮಗಳನ್ನು ನೀವು ಎಂದಾದರೂ ಪ್ರಶ್ನಿಸಿದ್ದೀರಾ.

 

ದೇಶದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಸೋಲಿಸುವ ಏಕಮಾತ್ರ ಕಾರಣಕ್ಕಾಗಿ ಬ್ಯಾಲೇಟ್ ಪೇಪರ್ ಬಣ್ಣ ಬದಲಿಸಿ, ಜನರ ಹಾದಿ ತಪ್ಪಿಸಿ ವಾಮಮಾರ್ಗದಲ್ಲಿ ಕಾಂಗ್ರೆಸ್ ಸೋಲಿಸಿತ್ತು. ಮಾನ್ಯ ಸಿದ್ದರಾಮಯ್ಯನವರೇ, ಈ ಚುನಾವಣಾ ಅಕ್ರಮದ ಬಗ್ಗೆ ತಿಳಿದಿದೆಯೇ?.

ಹುರುಳಿಲ್ಲದ ನಿಮ್ಮ ಆರೋಪ ಕೆಸುವಿನ ಎಲೆ ಮೇಲೆ ಬಿದ್ದ ನೀರಿನಂತೆ. ಬೇಗ ಜಾರಿ ಹೋಗುತ್ತದೆ. ಕಾಂಗ್ರೆಸ್ & ಕಂಪನಿಯದ್ದು ದಿನಕ್ಕೊಂದು ನಾಟಕ ಎಂದು ಜನತೆಗೆ ಚೆನ್ನಾಗಿ ಅರಿವಾಗಿದೆ. ನೀವು ಏನೇ ಕಸರತ್ತು ಮಾಡಿದರೂ ಮುಖ್ಯಮಂತ್ರಿಯೂ ಆಗುವುದಿಲ್ಲ, @INCKarnataka ಅಧಿಕಾರಕ್ಕೆ ಬರುವುದೂ ಇಲ್ಲ ಎಂದು ಸರಣಿ ಟ್ವೀಟ್ ಮಾಡಿದೆ.

Share This Article
Leave a Comment

Leave a Reply

Your email address will not be published. Required fields are marked *