ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈ ಲು ಸೇರಿ, ಒಂದಷ್ಟು ತಿಂಗಳು ಅಲ್ಲಿಯೇ ಇದ್ದು, ಜಾಮೀನು ಪಡೆದು ಹೊರಗೆ ಬಂದಿದ್ದಾರೆ. ಇದೀಗ ಮೊದಲ ಬಾರಿಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿದ್ದಾರೆ. ಸಂಕ್ರಾಂತಿ ಹಬ್ಬದ ಸಂಭ್ರಮದ ಫೋಟೋ ಹಂಚಿಕೊಂಡಿದ್ದಾರೆ. ಹಸುಗಳ ಜೊತೆಗಿನ ಫೋಟೋ ಹಂಚಿಕಿಂಡು ಖುಷಿ ಪಟ್ಟಿದ್ದಾರೆ.
ಸಂಕ್ರಾಂತಿ ಹಬ್ಬ ಎಂದರೆ ದರ್ಶನ್ ಅವರಿಗೆ ತುಂಬಾ ಸ್ಪೆಷಲ್. ಯಾಕಂದ್ರೆ ತನ್ನ ತೋಟದಲ್ಲಿರುವ ಹಸುಗಳನ್ನೆಲ್ಲ ಸ್ವಚ್ಛ ಮಾಡಿ, ಶೃಂಗಾರ ಮಾಡಿ, ರಾಸು ಹಾರಿಸುತ್ತಾರೆ. ಅದಕ್ಕೂ ಮುನ್ನ ತಾವರೆ ಮುಂದೆ ನಿಂತು ಹಸುಗಳ ಮೈ ತೊಳೆದು, ಹಸುಗೆ ತಿನ್ನಿಸುವ ಆಹಾರವನ್ನು ರೆಡಿ ಮಾಡುತ್ತಾರೆ. ಇದಕ್ಕೆಲ್ಲ ಸ್ನೇಹಿತರು ಸಾಥ್ ನೀಡುತ್ತಾರೆ. ಇದೆಲ್ಲ ಪ್ರತಿ ವರ್ಷ ನಡೆಯುತ್ತಿತ್ತು. ಆದರೆ ಈ ವರ್ಷ ದರ್ಶನ್ ಅವರು ಮುಂದೆ ನಿಂತು ಎಲ್ಲವನ್ನು ಮಾಡುವುದಕ್ಕೆ ಆಗಿಲ್ಲ. ತೋಟದಲ್ಲಿರುವವರು ಹಸುಗಳನ್ನು ಕ್ಲೀನ್ ಮಾಡಿದ್ದಾರೆ. ದರ್ಶನ್ ಅವರು ಮುಂದೆ ನಿಂತು ಎಲ್ಲವನ್ನು ನೋಡಿದ್ದಾರೆ.
ಬಳಿಕ ಒಂದು ಸ್ಮೈಲ್ ಮಾಡಿ ಹಸುವನ್ನು ಕರೆದುಕೊಂಡು ಹೋಗಿದ್ದಾರೆ. ಇದರ ಫೋಟೋ ಹಂಚಿಕೊಂಡಿರುವ ದರ್ಶನ್, ‘ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿಯ ಹಾರ್ದಿಕ ಶುಭಾಶಯಗಳು. ನಿಮ್ಮ ಜೀವನದಲ್ಲಿ ಸಂತೋಷವೆಂಬ ಗಾಳಿಪಟಗಳು ಎತ್ತರಕ್ಕೆ ಹಾರಲಿ, ಸಮೃದ್ಧಿ ಮತ್ತು ಸಂತೋಷವನ್ನು ತರಲಿ. ಎಳ್ಳು ಬೆಲ್ಲ ಹಂಚಿ ಹೊಸ ಭರವಸೆಯೊಂದಿಗೆ ಮಕರ ಸಂಕ್ರಾಂತಿಯನ್ನು ಬರಮಾಡಿಕೊಳ್ಳೋಣ’ ಎಂದು ಬರೆದಿದ್ದಾರೆ. ಪತ್ನಿ ವಿಜಯಲಕ್ಷ್ಮಿ ಅವರು ಕೂಡ ದರ್ಶನ್ ಜೊತೆಗಿರುವ ಫೋಟೋ ಹಾಗೂ ಹಸುಗಳ ಜೊತೆಗಿರುವ ಫೋಟೋ ಹಂಚಿಕೊಂಡಿದ್ದಾರೆ. ಮಗ ವಿನೀಶ್ ಕೂಡ ಹಳೇ ವಿಡಿಯೋ ಹಾಗೂ ಹೊಸ ವಿಡಿಯೋ ಮಿಕ್ಸ್ ಮಾಡಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳಂತು ತುಂಬಾ ಖುಷಿಯಾಗಿದ್ದಾರೆ.