ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 01 : ಡ್ರಿಲ್ಲಿಂಗ್ ವೇಳೆ ಆಯತಪ್ಪಿ ಬಿದ್ದು ಕಾರ್ಮಿಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಬಂಡೆಹಟ್ಟಿ ಗ್ರಾಮದಲ್ಲಿ ನಡೆದಿದೆ. 38 ವರ್ಷದ ನಾಗೇಂದ್ರ ಮೃತ ವ್ಯಕ್ತಿ.
ಮೃತ ನಾಗೇಂದ್ರ ಬಂಡೆಹಟ್ಟಿ ಗ್ರಾಮದವರು. ಕೂಲಿ ಕೆಲಸಕ್ಕೆಂದು ಸ್ಟೋನ್ ಕ್ರಷರ್ ಗೆ ಹೋಗುತ್ತಿದ್ದರು. ಡ್ರಿಲ್ಲಿಂಗ್ ವೇಳೆ ಆಯತಪ್ಪಿ ಬಿದ್ದು ನಾಗೇಂದ್ರ ಸಾವನ್ನಪ್ಪಿದ್ದಾರೆ. ಪ್ರತಿ ದಿನ ಎಚ್ಚರಿಕೆಯಿಂದಾನೇ ಕೆಲಸ ಮಾಡುತ್ತಿದ್ದವ ಇಂದು, ಸಾವಿನ ಕದ ತಟ್ಟಿದ್ದಾನೆ. ನಾಗೇಂದ್ರ ಸಾವಿನಿಂದ ಕುಟುಂಬಸ್ಥರು ದುಖತಪ್ತರಾಗಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಗೇಂದ್ರ ಕೂಲಿ ಕೆಲಸ ಮಾಡಿಕೊಂಡೆ ಮನೆಯನ್ನು ನೋಡಿಕೊಳ್ಳುತ್ತಿದ್ದರು. ಆದರೆ ಕೂಲಿಗೆ ಹೋದವ ಹೆಣವಾಗಿ ಬಂದರೆ ಮನೆಯವರ ಮನಸ್ಥಿತಿ ಹೇಗಿರಬೇಡ. ನಾಗೇಂದ್ರ ಸಾವಿನಿಂದ ಮನೆಯಲ್ಲಿ ಮೌನ ಆವರಿಸಿದೆ. ಜೀವನ ನಡೆಸಲು ಕೂಲಿ ಮಾಡಲು ಹೋದವ ಜೀವಂತವಾಗಿ ಬರಲೇ ಇಲ್ಲ.