ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188
ಸುದ್ದಿಒನ್, ಚಳ್ಳಕೆರೆ, ಜನವರಿ. 24 : ಅವೈಜ್ಞಾನಿಕ ಸಿಸಿ ರಸ್ತೆ ಕಾಮಗಾರಿ ಗ್ರಾಮದಲ್ಲಿ ಪ್ರಾರಂಭಿಸಿರುವುದು ತುಂಬಾ ನೋವಿನ ಸಂಗತಿ ಎಂದು ಗ್ರಾಮದ ಮುಖಂಡ ಕುಮಾರಸ್ವಾಮಿ ಆಕ್ರೋಶವನ್ನು ವ್ಯಕ್ತಪಡಿಸಿದ್ದರು.
ಶನಿವಾರ ಎನ್. ಮಹದೇವಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮನುಮೈನಹಟ್ಟಿ ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ ಮಾಡಿ ಮಾತನಾಡಿ, ಸರ್ಕಾರದ ಆದೇಶದ ಪ್ರಕಾರ ರಸ್ತೆ ಕಾಮಗಾರಿ ಮಾಡುವಂತೆ ಗುತ್ತಿಗೆದಾರರಿಗೆ ಮತ್ತು ಇಂಜಿನಿಯರ್ ರವರಿಗೆ ದೂರವಾಣಿ ಮೂಲಕ ಕಾಮಗಾರಿಯ ಪರಿಶೀಲನ ಬಗ್ಗೆ ಮಾತನಾಡಿದರೆ ಜಾಸ್ತಿ ಮಾತನಾಡಬೇಡಿ ನಿಮಗೆ ಬೇಕಾದರೆ ಆರ್ಡರ್ ಕಾಪಿ ತಂದುಕೊಡುತ್ತೇವೆ ನಾವು ಹಾಗೆ ಕಾಮಗಾರಿ ಮಾಡುವುದು ಎಂದು ಸೊಬೂಬು ಹೇಳುತ್ತಿದ್ದಾರೆ ಎಂದು ಮುಖಂಡ ಕುಮಾರ್ ಸ್ವಾಮಿ ಅರೋಪಿಸಿದ್ದಾರೆ.






