ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 06 : ಹಾಡುಹಗಲಲ್ಲೇ
ಸ್ಕೂಟಿಯಲ್ಲಿದ್ದ ಹಣ ದೋಚಿ ಕಳ್ಳತನ ಮಾಡಿರುವ ಘಟನೆ ನಗರದ ಬೆಂಗಳೂರು ರಸ್ತೆಯ ಮಾರುತಿ ಸ್ಟೋರ್ ಬಳಿ ನಡೆದಿದೆ.

ನರಹರಿ ನಗರದ ರವಿಕುಮಾರ್ ಕರ್ನಾಟಕ ಬ್ಯಾಂಕ್ ನಲ್ಲಿ 1.40 ಲಕ್ಷ ರೂ ಡ್ರಾ ಮಾಡಿಕೊಂಡು ಬೆಂಗಳೂರು ರಸ್ತೆಯ ಮಾರುತಿ ಸ್ಟೋರ್ ಕಿರಾಣಿ ಅಂಗಡಿ ಬಳಿ ಸ್ಕೂಟಿ ನಿಲ್ಲಿಸಿ ಒಳಗೆ ಹೋದಾಗ ಹೊಂಚು ಹಾಕಿ ಕಾಯುತ್ತಿದ್ದ ಮೂವರು ಖದೀಮರು ಈ ಕೃತ್ಯ ಮಾಡಿದ್ದಾರೆ. ಅವರಲ್ಲಿ ಓರ್ವ ಸ್ಕೂಟಿ ಕಾಣದಂತೆ ಅಂಗಡಿ ಮುಂದೆ ಅಡ್ಡವಾಗಿ ನಿಂತರೆ ಉಳಿದ ಇಬ್ಬರು ಸ್ಕೂಟಿಯಲ್ಲಿದ್ದ 1.40 ಲಕ್ಷ ಹಣವನ್ನು ಕದ್ದು ಮೂವರು ಪರಾರಿಯಾಗಿದ್ದಾರೆ.
ಸ್ಕೂಟಿ ಮಾಲಿಕ ರವಿಕುಮಾರ್ ಬಂದು ನೋಡಿದಾಗ ಹಣ ಕಳಾವಾಗಿರುವುದು ಬೆಳಕಿಗೆ ಬಂದಿದೆ.
ತಕ್ಷಣ ಅಂಗಡಿಯಲ್ಲಿ ಸಿ.ಸಿ.ಕ್ಯಾಮರ ಪರಿಶೀಲನೆ ಮಾಡಿದಾಗ ಮೂವರು ಸೇರಿ ಕಳವು ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ತಕ್ಷಣ ಪೋಲಿಸ್ ಠಾಣೆಗೆ ದೂರು ನೀಡಿದ್ದು ಸಿ.ಸಿ.ಕ್ಯಾಮರದಲ್ಲಿನ ದೃಶ್ಯಗಳನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.


