ಚಳ್ಳಕೆರೆ : ರೂ. 2 ಲಕ್ಷ ದೋಚಿದ ಕಳ್ಳ : ಸಿನಿಮೀಯ ಶೈಲಿಯಲ್ಲಿ ಕಳ್ಳನನ್ನು ಹಿಡಿದ ಯುವಕ..!

1 Min Read

ಸುದ್ದಿಒನ್, ಚಿತ್ರದುರ್ಗ, ಮೇ. 03 : ಕಳ್ಳರಿಗೆ ಖದೀಮರಿಗೆ ಮನುಷ್ಯತ್ವ ಇರೋದಿಲ್ಲ ಅನ್ನುವುದು ಇವತ್ತು ಮತ್ತೆ ಪ್ರೂವ್ ಆಯ್ತು. ಆ ಇದ್ದಿಲು ವ್ಯಾಪಾರಿ ಎರಡು ಲಕ್ಷ ರೂಪಾಯಿ ಉಳಿಸಿದ್ದಾರೆ ಅಂದ್ರೆ ಅವರು ಎಷ್ಟು ಕಷ್ಟಪಟ್ಟಿರಬೇಕು ಎಂಬುದು ಅರ್ಥವಾಗುತ್ತದೆ. ಪೈಸೆ ಪೈಸೆಯನ್ನು ನೀರು ಕುಡಿದು ಉಳಿಸಿರುತ್ತಾರೆ. ಹೀಗಿರುವಾಗ ಅಂಥ ಶ್ರಮದ ಹಣ ಕಳೆದು ಹೋಗುವುದಕ್ಕೆ ಸಾಧ್ಯನಾ. ಶ್ರಮಪಟ್ಟದ್ದು ನಮ್ಮ ಕೈ ಬಿಡುವುದಿಲ್ಲ ಎಂಬುದಕ್ಕೂ ಈ ಇದ್ದಿಲು ವ್ಯಾಪಾರಿಯೇ ಉದಾಹರಣೆ. ಯಾರಿದು ಇದ್ದಿಲ ವ್ಯಾಪಾರಿ..? ಏನಾಯ್ತು ಅನ್ನೋದು ನಿಮಗೆ ಪ್ರಶ್ನೆ ಕಾಡುತ್ತಿರಬಹುದು ಅಲ್ವಾ. ಅದಕ್ಕೆ ಉತ್ತರ ಇಲ್ಲಿದೆ ನೋಡಿ.

ಚಳ್ಳಕೆರೆ ತಾಲೂಕಿನ ಹಾಲಗೊಂಡನಹಳ್ಳಿ ಗ್ರಾಮದಲ್ಲಿ ತಿಪ್ಪೆಸ್ವಾಮಿ ಎಂಬಾತ ಇದ್ದಲು ವ್ಯಾಪಾರವನ್ನ ಮಾಡ್ತಾ ಇದ್ದಾರೆ. ಇಂದು ಚಳ್ಳಕೆರೆ ನಗರದ ಕೆನರಾ ಬ್ಯಾಂಕಿಗೆ ಬಂದಿದ್ದರು. ಬ್ಯಾಂಕ್ ನಲ್ಲಿದ್ದ ಎರಡು ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡು, ಅಷ್ಟು ದೊಡ್ಡ ಮೊತ್ತವನ್ನ ತನ್ನ ಬೈಕಿನ ಸೈಡ್ ಬ್ಯಾಗಿನಲ್ಲಿಟ್ಟುಕೊಂಡಿದ್ದರು. ತಿಪ್ಪೆಸ್ವಾಮಿಯನ್ನ ಗಮನಿಸಿದ್ದ ಅನ್ಸುತ್ತೆ. ಬೈಕ್ ಹತ್ತುವ ವೇಳೆ ಬೈಕಿನ ಬ್ಯಾಗಿನಲ್ಲಿದ 2 ಲಕ್ಷ ರೂಪಾಯಿಯನ್ನ ಕಳ್ಳನೊಬ್ಬ ಕದ್ದು ಪರಾರಿಯಾಗುವುದಕ್ಕೆ ಪ್ರಯತ್ನಿಸಿದ.

ತಿಪ್ಪೇಸ್ವಾಮಿ ತಕ್ಷಣ ಅಕ್ಕಪಕ್ಕದವರನ್ನು ಕೂಗಿದರು. ಕಳ್ಳ ನನ್ನ ಹಣ ಕದ್ದುಕೊಂಡು ಹೋಗುತ್ತಿದ್ದಾನೆಂದು ಕಿರುಚಿದರು. ಕಳ್ಳ ಹಣ ಕದ್ದು ಪರಾರಿಯಾಗುವ ವೇಳೆ ಕಾಟಪ್ಪನಹಟ್ಟಿ ಮಂಜುನಾಥ ಎನ್ನುವ ಯುವಕ ಕಳ್ಳನನ್ನ ಹಿಡಿದು ಪೋಲೀಸರಿಗೆ ಒಪ್ಪಿಸಿದ್ದಾನೆ. ಆ ಹಣ ಸಿಗುವಂತೆ ಮಾಡಿದ ಮಂಜುನಾಥ್ ಅವರಿಗೆ ತಿಪ್ಪೇಸ್ವಾಮಿ ಕೃತಜ್ಞತೆಗಳನ್ನು ಹೇಳಿದ್ದಾರೆ. ಅಷ್ಟೊಂದು ಹಣ ಕದ್ದ ಕಳ್ಳ ಇನ್ನು ಚಿಕ್ಕ ವಯಸ್ಸು. ಸೊಲ್ಲಪುರದವನು ಎಂದು ತಿಳಿದು ಬಂದಿದೆ ಚಳ್ಳಕೆರೆ ಪೋಲೀಸರು ತನಿಖೆ ಕೈಗೊಂಡಿದ್ದಾರೆ.

ಯಾರೇ ಆಗಲಿ ಬ್ಯಾಂಕ್ ಗೆ ಹೋಗುವಾಗ ಅದರಲ್ಲೂ ಹಣ ಡ್ರಾ ಮಾಡಿಕೊಂಡು ಬರುವಾಗ ಬಹಳ ಎಚ್ಚರಿಕೆಯಿಂದ ಇರಿ. ಯಾಕಂದ್ರೆ ಖದೀಮರು ನಿಮ್ಮನ್ನ ಹಿಂಬಾಲಿಸುತ್ತಾ ಇರುತ್ತಾರೆ. ಅದರಲ್ಲೂ ದೊಡ್ಡಮೊತ್ತದ ಹಣ ತರುವಾಗ ಕಳ್ಳರಿಗೆ ಗೊತ್ತಾಗದಂತೆ ತನ್ನಿ.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks