ಅಭಿವೃದ್ಧಿ ಪಥದತ್ತ ಚಳ್ಳಕೆರೆ ದಾಪುಗಾಲು : ಶಾಸಕರ ಇಚ್ಚಾ ಶಕ್ತಿಯಿಂದ ಸಾಲು ಸಾಲು ಅಭಿವೃದ್ಧಿ ಕಾರ್ಯ : ರಾಜಣ್ಣ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜುಲೈ. 16 : ಈ ನಗರವನ್ನ ನೋಡಿದರೆ ಯಾವುದೋ ದೊಡ್ಡ ನಗರಕ್ಕೆ ಬಂದಿದ್ದವೆ ಎನ್ನಿಸುತ್ತದೆ. ಶಾಸಕ ಟಿ.ರಘುಮುರ್ತಿಯವರು ತಾಲೂಕನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕಾಡುಗೊಲ್ಲರ ಸಂಘದ ರಾಜ್ಯಾಧ್ಯಕ್ಷರಾದ ರಾಜಣ್ಣ ಹೇಳಿದರು.

ನಗರದ ವಿಠಲ್ ನಗರದಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡು ಮುಕ್ತಾಯ ಹಂತದಲ್ಲಿರುವ ಶ್ರೀ ಕೃಷ್ಣ ಭವನ ಕಾಮಗಾರಿ ವೀಕ್ಷಣೆ ಮಾಡಿ ನಂತರ ಅವರು
ಚಳ್ಳಕೆರೆ ಕ್ಷೇತ್ರದಲ್ಲಿ ನಡೆದಿರುವ ಸಾಲು ಸಾಲು ಅಭಿವೃದ್ಧಿ ಕಾರ್ಯಗಳನ್ನು ನೋಡಿದರೆ ಶಾಸಕರು ತಮ್ಮ ಇಚ್ಛಾಶಕ್ತಿಯಿಂದ ವಿಶಾಲವಾದ ರಸ್ತೆಗಳು ಎಲ್ಲಿ ನೋಡಿದರೂ ದೊಡ್ಡ ದೊಡ್ಡ ಸರ್ಕಾರಿ ಕಟ್ಟಡಗಳು, ಇಂಜಿನಿಯರ್ ಕಾಲೇಜ್ ಜಿಟಿಟಿಸಿ ಕೇಂದ್ರ , ಉತ್ತಮ ಸೌಕರ್ಯ ಹೊಂದಿರುವ ಶಾಲಾ ಕಟ್ಟಡಗಳು, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ರಂಗ ಮಂದಿರ ಹಾಗೂ ವೇದವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ , ಅಂಡ್.ಬ್ರೀಜ್ ತಾಲೂಕಿನ ಎಲ್ಲಾ ಸಮುದಾಯದ ಗಳಿಗೂ ಸಮುದಾಯ ಭವನಗಳ ನಿರ್ಮಾಣ ಇಷ್ಟೆಲ್ಲ ಕಾರ್ಯಗಳನ್ನು ಮಾಡಿರುವುದು ಅವರ ಇಚ್ಛಾಶಕ್ತಿ ಇಲ್ಲಿ ಎದ್ದು ತೋರುತ್ತದೆ.

ಅಷ್ಟೇ ಅಲ್ಲದೆ ತನ್ನ ಕ್ಷೇತ್ರಕ್ಕೆ ಬೇಕಾಗುವಂತಹ ಎಲ್ಲಾ ಅನುಕೂಲಗಳನ್ನು ಕೇಳಿ ಪಡೆದು ಕ್ಷೇತ್ರವನ್ನೇ ಅಭಿವೃದ್ಧಿಯ ಕ್ಷೇತ್ರವನ್ನಾಗಿ ಮಾಡಿದ್ದಾರೆ.. ನಮ್ಮ ಗೊಲ್ಲ ಸಮುದಾಯಕ್ಕೆ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಈ ಸುಸರ್ಜಿತವಾದ ಶ್ರೀಕೃಷ್ಣ ಸಮುದಾಯ ಭವನ ನಿರ್ಮಾಣ ಮುಂದಿನ ದಿನಗಳಲ್ಲಿ ನಮ್ಮ ಸಮುದಾಯಕ್ಕೆ ಅನುಕೂಲವಾಗಲಿದೆ. ನಮ್ಮ ಸಮುದಾಯದ ಜನ ಇದರ ಸದೂಪಯೋಗ ಪಡೆದುಕೊಂಡು ಸಮುದಾಯ ಭವನದಲ್ಲಿ ಶ್ರೀ ಕೃಷ್ಣ ಜಯಂತಿ, ಮದುವೆ ಇತರ ಶುಭಾಕಾರ್ತಗಳ ಕಾರ್ಯಗಳನ್ನು ಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಕಾಡುಗೊಲ್ಲರ ಸಂಘದ ಗೌರವ ಅಧ್ಯಕ್ಷರಾದ ಮೀಸೆ ಮಹಾಲಿಂಗಪ್ಪ ಮಾತನಾಡಿ, ಎರಡು ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಶ್ರೀ ಕೃಷ್ಣ ಭವನ ಇದೆ ಮೊದಲ ಬಾರಿಗೆ ನಮ್ಮ ಸಮುದಾಯಕ್ಕೆ ನಿರ್ಮಾಣವಾಗಿರುವುದು ಸಂತಸದ ವಿಚಾರ ಶಾಸಕರು ತುಂಬಾ ಉತ್ತಮವಾದ ಕಾರ್ಯ ಮಾಡುತ್ತಿದ್ದಾರೆ ಇಲ್ಲಿ ಎಲ್ಲ ಭವನಗಳನ್ನು ಬಹಳ ಸೂಚರ್ಚಿತವಾಗಿ ನಿರ್ಮಾಣ ಮಾಡಿದ್ದಾರೆ. ಜೊತೆಗೆ ನಮ್ಮ ಸಮುದಾಯಕ್ಕೆ ಅದರಲ್ಲೂ ವಿದ್ಯಾರ್ಥಿನಿಯರಿಗೆ ಹೆಚ್ಚು ಹೆಚ್ಚು ಹಾಸ್ಟೆಲ್ ವ್ಯವಸ್ಥೆ ಮಾಡಿಕೊಡಬೇಕು ಎಂದರು..
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷರು ಹಾಗೂ ಕಾಡುಗೊಲ್ಲ ಸಂಘದ ಮುಖಂಡರಾದ ರವಿಕುಮಾರ್. ವಕೀಲರು ಹಾಗೂ ಕಾಡುಗೊಲ್ಲರ ಸಂಘದ ಉಪಾಧ್ಯಕ್ಷರು ಹಾಗೂ ಪರಶುರಾಮಪುರ ಹೋಬಳಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಟಿ ಶಶಿಧರ್ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಡುಗೊಲ್ಲರ ಸಂಘದ ಕಾರ್ಯದರ್ಶಿ ಅರಸೀಕೆರೆ ಪ್ರಭು, ಕಾಡುಗೊಲ್ಲರ ಸಂಘದ ಪದಾಧಿಕಾರಿಗಳಾದ ಮೂರ್ತಿ ಸಿದ್ದಪುರ ಮಂಜುನಾಥ್, ಜೆಸಿಬಿ ವೀರೇಶ್, ಭಾನು ವೀರೇಶ್, ತಿಪ್ಪೇಸ್ವಾಮಿ (ಜೋಗಿ) ಓಬನಹಳ್ಳಿ ಮಂಜಣ್ಣ, ಸೇರಿದಂತೆ ಕಾಡುಗೊಲ್ಲರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks