Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಳ್ಳಕೆರೆ | ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ; 110 ಜನರ ಬಂಧನ 3 ಲಕ್ಷಕ್ಕೂ ಹೆಚ್ಚು ನಗದು ವಶ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 21 : ಯುಗಾದಿ ಹಬ್ಬದ ನೆಪದಲ್ಲಿ ಇಸ್ಪೀಟ್ ಆಟಕ್ಕೆ ಕಡಿವಾಣ ಹಾಕಲು ಪೋಲೀಸ್ ಹಲವು ಕ್ರಮಗಳನ್ನ ಕೈಗೊಂಡಿದ್ದರೂ ಸಹ ತಾಲ್ಲೂಕಿನ ಹಲವು ಕಡೆ ಗುಂಪು ಕಟ್ಟಿಕೊಂಡು ಇಸ್ಪೀಟ್ ಆಡುತ್ತಿದ್ದ ಅಡ್ಡೆಗಳ ಮೇಲೆ ಚಳ್ಳಕೆರೆ ಪೊಲೀಸರಿಂದ ದಾಳಿ ನಡೆಸಿದ್ದಾರೆ. ಯುಗಾದಿ ಮೊದಲ ಹಬ್ಬದಿಂದ ಇಲ್ಲಿಯ ವರೆಗೆ 110 ಮಂದಿಯನ್ನ ಬಂಧಿಸಿ ಅವರಿಂದ 3,25,660 ನಗದು ವಶಕ್ಕೆ ಪಡೆದು 110 ಜನರನ್ನು ಬಂಧಿಸಲಾಗಿದೆ.

ತಾಲ್ಲೂಕಿನ ವಿವಿಧ ಕಡೆ ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟ್ ಆಡುತ್ತಾರೆ ಎನ್ನುವ ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಎಸ್ ಪಿ ರಂಜತ್ ಕುಮಾರ್ ಬಂಡಾರು ಹಾಗೂ ಚಳ್ಳಕೆರೆ ಡಿವೈಎಸ್ಪಿ ಎಂಜಿ. ಸತ್ಯನಾರಾಯಣರಾವ್ ಇವರ ಮಾರ್ಗದರ್ಶನದಲ್ಲಿ ಚಳ್ಳಕೆರೆ ಪೊಲೀಸ್ ಇನ್ಸ್ಪೆಕ್ಟರ್ ಕೆ. ಕುಮಾರ್ ಇವರ ನೇತೃತ್ವದ ತಂಡ ಚಳ್ಳಕೆರೆ ತಾಲೂಕಿನ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಅಡ್ಡೆಗಳ ಮೇಲೆ ದಾಳಿ ಮಾಡಿ 29 ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಈ ದಾಳಿ ವೇಳೆ ಪೋಲಿಸ್ ಇನ್ಸ್ಪೆಕ್ಟರ್ ಕೆ ಕುಮಾರ್, ಪಿಎಸ್ ಐ ಗಳಾದ ವಿರೇಶ ಧರಪ್ಪ ಬಾಳಪ ದೊಡ್ಡಮನಿ, ಪೊಲೀಸ್ ಸಿಬ್ಬಂದಿಗಳಾದ ಶಂಕಣ್ಣ, ವಸಂತಕುಮಾರ್, ಅಶೋಕ, ಮಂಜುನಾಥ, ಶ್ರೀಧರ್, ಪರಶುರಾಮ, ತಿಲಕ್ ರಾಜ್, ರಮೇಶ ಬಾರ್ಕಿ, ಲೋಕೇಶ, ಕುಮಾರ್, ತಿರುಕಪ್ಪ ತಳವಾರ, ಬಸವರಾಜ್, ವಿರೇಶ, ವೆಂಕಟೇಶ, ಗಂಗಾಧರ್ ನಂದೀಶ, ನವೀನ್, ಸುನೀಲ್ ಇತರರಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...