Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಚಳ್ಳಕೆರೆ | ರೈತರಿಗೆ ಅವತಾರ ತೋರಿಸಿದ ಮೆಕ್ಕೆಜೋಳ ಬೀಜ

---Advertisement---

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 03 : ನಗರದ ಎಸ್ ಆರ್ ಎಂ ಟಿ ಎಂಟರ್ಪ್ರೈಸಸ್ ಎಂಬ ರಸಗೊಬ್ಬರ ಬೀಜ ಮಾರಾಟಗಾರರ ಅಂಗಡಿಯಲ್ಲಿ ಅವತಾರ್ ಎಂಬ ಕಳಪೆ ಗುಣಮಟ್ಟದ ಮೆಕ್ಕೆಜೋಳ ಬೀಜವನ್ನು ನೀಡಿ ರೈತರನ್ನು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ರೈತರು ಕೆ ಎಸ್ ಆರ್ ಟಿ ಸಿ ನಿಲ್ದಾಣದ ಮಳಿಗೆಯಲ್ಲಿರುವ ಅಂಗಡಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಫಸಲು ಬಾರದ ಮೆಕ್ಕೆಜೋಳ ಸಮೇತ ಅಂಗಡಿಗೆ ಬಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಮಾತಾಡಿದ ಕಾಟಮ್ಮ ದೇವರಕೋಟೆ ಗ್ರಾಮದ ರೈತ ಮಂಜಣ್ಣ ಮಾತನಾಡಿ ಎಸ್ ಆರ್ ಎಂ ಟಿ ಎಂಬ ಬೀಜ ಮಾರಾಟ ಅಂಗಡಿಯಲ್ಲಿ ಅವತಾರ್ ಎಂಬ ತಳಿಯ ಮೆಕ್ಕೆಜೋಳ ಬೀಜವನ್ನು 1500 ಗಳಿಗೆ ಖರೀದಿಸಿ ಸುಮಾರು 4 ಎಕರೆಯಲ್ಲಿ ಬಿತ್ತನೆ ಮಾಡಿದ್ದೆವು ಮೂರು ತಿಂಗಳು ಕಳೆದರು ಬೆಳೆ ಬಾರದಿದ್ದಾಗ ಆತಂಕಗೊಂಡಿದ್ದೆವು ಬೆಳೆ ಬಂದರೂ ಸಹ ಅರ್ಧಂಬರ್ಧ ಬೆಳೆ ಬಂದಿದೆ ನಮ್ಮ ಲೆಕ್ಕಚಾರದ ಪ್ರಕಾರ ಮೂರು ತಿಂಗಳಲ್ಲಿ 250 ರಿಂದ 300 ಚೀಲ ಬೆಳೆ ಬರಬೇಕಾಗಿತ್ತು ಆದರೆ 50 ರಿಂದ 60 ಚೀಲ ಸಹ ಬೆಳೆ ಬಂದಿಲ್ಲ ಇದನ್ನು ಅಂಗಡಿ ಮಾಲೀಕನಿಗೆ ಪ್ರಶ್ನಿಸಿದಾಗ ಅಂಗಡಿ ಮಾಲೀಕ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಳೆ ಅಧಿಕವಾಗಿ ಬಂದಿರುವುದರಿಂದ ನಿಮ್ಮ ಬೆಳೆ ಸರಿಯಾಗಿ ಬಂದಿಲ್ಲ ನಾವು ನೀಡಿರುವ ಮೆಕ್ಕೆಜೋಳದ ಬೀಜ ಉತ್ತಮ ಗುಣಮಟ್ಟದ್ದಾಗಿದ್ದು ಎಲ್ಲಿಯೂ ಸಹ ದೂರುಗಳು ಕೇಳಿ ಬಂದಿಲ್ಲ ನೀವು ಎಲ್ಲಿ ಬೇಕಾದರೂ ದೂರು ದಾಖಲಿಸಬಹುದು ಎಂದು ಉಡಾಫೆ ಉತ್ತರ ನೀಡಿದ್ದಾನೆ ಎಂದು ಆರೋಪಿಸಿದರು. ತಾಲೂಕಿನಲ್ಲಿ ರೈತರು ಖರೀದಿಸಿರುವ ಅವತಾರ್ ಬೀಜದಿಂದ ನಾನಾ ಅವಾಂತರಗಳು ಸೃಷ್ಟಿಯಾಗಿದ್ದು ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಕ್ಷಣ ಅಂಗಡಿ ಮಾಲೀಕನ ವಿರುದ್ಧ ಕ್ರಮ ಕೈಗೊಂಡು ರೈತರಿಗೆ ನ್ಯಾಯ ದೊರಕಿಸಿ ಕೊಡುವರೇ ಕಾದು ನೋಡಬೇಕಿದೆ.

Join WhatsApp

Join Now

Join Telegram

Join Now