ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಮಾರ್ಚ್. 02 : ಜಮೀನಿನ ಬೇಲಿಗೆ ಬೆಂಕಿ ಇಟ್ಟ ವಿಚಾರಕ್ಕೆ ದೊಣ್ಣೆಯಿಂದ ಹಲ್ಲೆ ಮಾಡಿದ ಕಾರಣ ಒರ್ವನಿಗೆ ಕೈ ಮುರಿದು ಮತ್ತೊರ್ವ ಮಹಿಳೆಗೆ ಗಾಯಗಳಾದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಲ್ಲೂಕಿನ ಯಲಗಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ವಿರೂಪಾಕ್ಷ ಎನ್ನುವ ವ್ಯಕ್ತಿ ಬೇಲಿಗೆ ಬೆಂಕಿ ಇಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸ್ವಲ್ಪ ಮೆಕ್ಕೆ ಜೋಳ ಬೆಳೆ ಸುಟ್ಟಿದೆ. ಬೇಲಿಗೆ ಬೆಂಕಿ ಇಟ್ಟಿದ್ದಕ್ಕೆ ಪ್ರಶ್ನೆ ಮಾಡಿದಕ್ಕೆ ವಿರುಪಾಕ್ಷ, ಲಕ್ಷ್ಮೀದೇವಿ, ಚಂದ್ರಣ್ಣ ಸುದೀಪ್ ಉಮೇಶ ಇವರು ಗುಂಪು ಕಟ್ಟಿಕೊಂಡು ಬಂದು ಕೈಯಲ್ಲಿದ್ದ ದೊಣ್ಣೆ ಹಾಗೂ ಕಲ್ಲುಗಳಿಂದ ಚನ್ನವೀರ ಹಾಗೂ ನೇತ್ರಾವತಿ ಚೆಲಿಮಕ್ಕ ಇವರ ಮೇಲೆ ಹಲ್ಲೆ ಮಾಡಿದ್ದಾರೆ. ಚನ್ನವೀರ ಇವರಗೆ ಕೈ ಮುರಿದ್ದು ಚಲಿಮಕ್ಕ ಎನ್ನುವ ಮಹಿಳೆಗೆ ತಲೆ ಹಾಗೂ ಇತರೆ ಭಾಗಗಳಿಗೆ ಗಾಯಗಳಾಗಿದ್ದು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಆಸ್ಪತ್ರೆ ಗೆ ದಾಖಲಿಸಿದ್ದಾರೆ.
ಈ ಗಲಾಟೆ ವಿಚಾರ ಕುರಿತಂತೆ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಾಗಿದ್ದು. ಹಲ್ಲೆ ಮಾಡಿಸಿದ ವಿರುಪಾಕ್ಷ ಸಹ ಪ್ರಕರಣವನ್ನ ದಾಖಲಿಸಿದ್ದಾರೆ.

