ಚಳ್ಳಕೆರೆ | ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಸುದ್ದಿಒನ್ ನ್ಯೂಸ್‌, suddione, suddione news, chitradurga, ಚಿತ್ರದುರ್ಗ,ಬೆಂಗಳೂರು, bengaluru, ಚಳ್ಳಕೆರೆ, challakere,

 

ಸುದ್ದಿಒನ್, ಚಳ್ಳಕೆರೆ, ಮೇ. 24 :  2023 ನೇ ಸಾಲಿನಲ್ಲಿ ಚಳ್ಳಕೆರೆ ತಾಲೂಕಿನಲ್ಲಿ ಸಂಪೂರ್ಣ ಮಳೆ ಬಾರದೆ ರೈತರು ಕಂಗಾಲಾಗಿದ್ದು, ಇತ್ತ ಬೆಳೆಯು ಕೂಡ ಒಣಗಿ ಹೋಗಿದ್ದು, ಅಲ್ಪಸ್ವಲ್ಪ ಕೂಡ ರೈತ ಗೆ ಕೈಗೆ ಸಿಕ್ಕಿರುವುದಿಲ್ಲ 2024 ರ ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರ ಕೃಷಿ ಚಟುವಟಿಕೆಗಳಿಗೆ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡಬೇಕು ಇವರ ಸಹಾಯಕ್ಕೆ ಸರ್ಕಾರ ಬರಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ  ಒತ್ತಾಯಿಸಿದರು.

ಶುಕ್ರವಾರ  ನಗರದ ತಾಲೂಕು ಕಚೇರಿ ಮುಂಭಾಗದಲ್ಲಿ ತಹಶೀಲ್ದಾರ್ ರಹೇನ್ ಪಾಷಾ ರವರಿಗೆ ಮನವಿ ಪತ್ರ ಸಲ್ಲಿಸಿ ಮಾತನಾಡಿ,ರಾಜ್ಯ ಸರ್ಕಾರ ಚಳ್ಳಕೆರೆ ತಾಲ್ಲೂಕು ಬರಗಾಲ ಪೀಡಿತವೆಂದು ಘೋಷಿಸಿದರು ಕೂಡ ರೈತರಿಗೆ ನ್ಯಾಯಯುತವಾಗಿ ಬರುವ ಬೆಳೆ ವಿಮೆ  ಹಾಗೂ ಬೆಳೆ ಪರಿಹಾರ ರೈತರ ಖಾತೆಗೆ ಇನ್ನೂ ಜಮಾ ಆಗಿಲ್ಲ  ದೇಶಕ್ಕೆ ಅನ್ನ ಕೊಡುವ ರೈತ ನಮ್ಮ ನಾಳುವ ಸರ್ಕಾರಗಳು ರೈತರ ಹೆಮ್ಮೆಟ್ಟಿಸುವ ಕೆಲಸ ಮಾಡುತ್ತೇವೆ, ಅಷ್ಟೇ ಅಲ್ಲದೆ ಬ್ಯಾಂಕಿನ ಅಧಿಕಾರಿಗಳು ರೈತರಿಗೆ ಬಂದ ಬೆಳೆ ವಿಮೆ ಹಾಗೂ ಬೆಳೆ ನಷ್ಟ ಪರಿಹಾರವನ್ನು ಸಾಲಕ್ಕೆ ಜಮ ಮಾಡಿಕೊಳ್ಳುತ್ತಿದ್ದಾರೆ . ಸಾಲಕ್ಕೆ ಬೆಳೆ ವಿಮೆ ಪರಿಹಾರ ಜಮ ಮಾಡಿಕೊಳ್ಳದಂತೆ  ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಬೇಕು.ತಾಲೂಕಿನಾದ್ಯಂತ ಮುಂಗಾರು ಮಳೆ ಪ್ರಾರಂಭವಾಗಿದ್ದು ರೈತರ ಕೃಷಿ ಚಟುವಟಿಕೆಗಳಿಗೆ ಪೂರಕವಾದ ಬಿತ್ತನೆ ಬೀಜ ರಸಗೊಬ್ಬರ ದಾಸ್ತಾನು ಮಾಡುವಲ್ಲಿ ವಿಳಂಬ ಧೋರಣೆ ತೋರುತ್ತಿದೆ ಮುಂದೆ ಮಳೆ ಬರುವ ಸೂಚನೆಯಿದ್ದು ರೈತರು ಬಿತ್ತನೆ ಬೀಜ ಹಾಗೂ ರಹಗೊಬ್ಬರ ಇಲ್ಲದೆ ಸಂಕಷ್ಟದಲ್ಲಿದ್ದಾರೆ,ರೈತ ದೇಶದ ಬೆನ್ನೆಲುಬು ಎಂದು ಹೇಳುವ ಸರ್ಕಾರ ರೈತರ ಬಾಯಿಗೆ ಮಣ್ ಹಾಕಿದೆ ಎಂದು ಆಕ್ರೋಶ ಭರಿತರಾಗಿ ಮಾತನಾಡಿದರು.

ರೈತರ ಹಕ್ಕೊತ್ತಾಯಗಳು :
_____________________

ಬೆಳೆ ವಿಮೆ ಬೆಳೆ ಪರಿಹಾರ

ರೈತರಿಗೆ ರಸಗೊಬ್ಬರ

ಸಕಾಲಕ್ಕೆ ವಿದ್ಯುತ್ ಸರಬರಾಜು

ರೈತರ ಸಾಲ ಮನ್ನಾ

ರೈತರಿಗೆ ಬೆಂಬಲ ಬೆಲೆ

ಇವನ್ನೆಲ್ಲ ಕೊಡಿಸಿದರೆ ಮಾತ್ರ ಒಬ್ಬ ರೈತ ದೇಶಕ್ಕೆ ಅನ್ನ ಹಾಕಲು ಸಾಧ್ಯ ,,
ನಾವು ಬೆಳೆಯದಿದ್ದರೆ ನೀವೇನು ತಿನ್ನುತ್ತೀರಿ ,,,
ಹೇಳ್ರಿ ಸಿದ್ದರಾಮಯ್ಯ,,
ರೈತರ ಹೊಟ್ಟೆಗೆ ಬರೀ ಎಳೆಯುವುದು ಬಿಟ್ಟು ,,,,
ರೈತರ ಹಿತ ಚಿಂತಕರಾಗಿ ಸಿದ್ದರಾಮಯ್ಯ ,,,
ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು ,
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದ ರ್   ರೇಹಾನ್ ಪಾಷ  ಬ್ಯಾಂಕ್ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ರೈತರ ಹಣ ಸಾಲಕ್ಕೆ ಜಮಾ ಮಾಡಿಕೊಳ್ಳಬಾರದು ಬೆಳೆ ಪರಿಹಾರ ಹಾಗೂ ಬೆಳೆ ವಿಮೆ ಕುರಿತಂತೆ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಇನ್ನು ಈ ಸಂದರ್ಭದಲ್ಲಿ
ಆರ್ ಬಸವರಾಜ್, ತಿಪ್ಪೇಸ್ವಾಮಿ , ಪ್ರಗತಿಪರ ರೈತ ಆರ್ ಎ.ಡಾ. ದಯಾನಂದ್ ,ಶ್ರೀಕಂಠ ಮೂರ್ತಿ, ತಿಪ್ಪೇಸ್ವಾಮಿ, ಎನ್ ದೇವನಹಳ್ಳಿ ರಾಜಣ್ಣ,ಚಂದ್ರಣ್ಣ,  ರೈತ ಮಹಿಳೆ ಸೇರಿದಂತೆ ರೈತ ಮುಖಂಡರು ಭಾಗಿಯಾಗಿದ್ದರು.

Share This Article
Leave a Comment

Leave a Reply

Your email address will not be published. Required fields are marked *