ಚಳ್ಳಕೆರೆ | ಅಕ್ರಮ ಜಾನುವಾರು ಸಾಗಾಟ : ಇಬ್ಬರ ಬಂಧನ

1 Min Read

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ, ಚಳ್ಳಕೆರೆ
ಮೊ : 8431413188

ಸುದ್ದಿಒನ್, ಚಳ್ಳಕೆರೆ, ಜನವರಿ. 07 : ಟಾಟಾ ಏಸ್ ವಾಹನದಲ್ಲಿ ಸುಮಾರು 2 ಹಸು 3 ಕರುಗಳನ್ನು ಅಕ್ರಮವಾಗಿ ತುಂಬಿಕೊಂಡು ಕಸಾಯಿಖಾನೆಗೆ ಸಾಗಿಸುತ್ತಿದ್ದ ಟಾಟಾ ಎಸ್ ವಾಹನವನ್ನು ಚಳ್ಳಕೆರೆ ಪೋಲೀಸ್ ವಶಕ್ಕೆ ಪಡೆದು ಜಾನುವಾರುಗಳನ್ನು ರಕ್ಷಣೆ ಮಾಡಿ ಕುರುಡಿ ಹಳ್ಳಿ ಗೋಶಾಲೆಗೆ ಬಿಟ್ಟು ಬಂದ್ದಿದ್ದು ಇಬ್ಬರನ್ನು ಬಂಧಿಸಿ ಪ್ರಕರಣವನ್ನು ದಾಖಲಿಸಿದ್ದಾರೆ.

ಟಾಟಾ ಏಸು ವಾಹನದಲ್ಲಿ ಅಕ್ರಮ‌ ಜಾನುವಾರುಗಳನ್ನು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಾಯಕನಹಟ್ಟಿ ಕಡೆಯಿಂದ ಬಂದ ಟಾಟಾ ಏಸ್ ವಾಹನವನ್ನು ಪಿಎಸ್ ಐ ಈರೇಶ್ ತಡೆದು ಪರಿಶೀಲನೆ ಮಾಡಿದ ವೇಳೆ ವಾಹನದಲ್ಲಿ 2 ಹಸು ಹಾಗೂ 3 ಕರುಗಳು‌ ಇರುವುದು ಕಂಡು ಬಂದಿದೆ. ವಾಹನ ಚಾಲಕ ಆಂಧ್ರ ಪ್ರದೇಶ ಮೂಲದ ರಾಜಣ್ಣಹಾಗೂ ಪಾಲಯ್ಯ ಇಬ್ಬರನ್ನೂ ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಜಾನುವಾರುಗಳ ಮಾಲೀಕರು ಚಳ್ಳಕೆರೆ ಪೋಲೀಸ್ ಠಾಣೆಗೆ ಸಂಪರ್ಕಿಸುವಂತೆ ನಗರ‌ ಪೋಲೀಸ್ ಠಾಣೆ‌ಯ ಪಿಓ ಕೆ. ಕುಮಾರ್ ತಿಳಿಸಿದ್ದಾರೆ.

Share This Article
Enable Notifications OK No thanks