ಚಳ್ಳಕೆರೆ, ಮಾರ್ಚ್. 25 : ಕಳ್ಳತನದಂತ ಪ್ರಕರಣಗಳು ಸಿನಿಮಾದಲ್ಲಿ ನಡೆದಂತೆ ನಡೆಯುವುದನ್ನು ನೋಡಿದ್ದೇವೆ. ಆದರೆ ದೇವರ ಈಗ ದೇವರ ಆಭರಣಗಳು ಕೂಡ ಸಿನಿಮಾದಲ್ಲಿ ನಡೆದಂತೆಯೇ ಆಗಿದೆ. ಕಾಂತಾರ ಸಿನಿಮಾದ ಕಥೆಯನ್ನೇ ಹೋಲುವಂತಹ ದೈವದ ಆಭರಣಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಗಾರ ದೇವರಹಟ್ಟಿ ಗ್ರಾಮದಲ್ಲಿ ನಡೆದಿದೆ. ದೇವಸ್ಥಾನಕ್ಕೆ ಬುನಾದಿ ಹಾಕುವ ವೇಳೆ ದೇವರ ಚಿನ್ನದ ಆಭರಣ ಇರುವ ಪೆಟ್ಟಿಗೆ ಪತ್ತೆಯಾಗಿದೆ.

ಮ್ಯಾಸ ನಾಯಕ ಬುಡಕಟ್ಟು ಸಂಸ್ಕೃತಿಗೆ ಸೇರಿದ ದೇವರ ಆಭರಣ ಇದಾಗಿದೆ. ಪೂಜಾರಿಯೊಬ್ಬ 60 ವರ್ಷಗಳ ಹಿಂದೆ ಜಾತ್ರೆ ನಂತರ ಆಭರಣದ ಪೆಟ್ಟಿಗೆಯನ್ನು ಹೂತಿಟ್ಟಿದ್ದ. ಪ್ರತಿವರ್ಷ ಜಾತ್ರೆಯಲ್ಲಿ ಮಾತ್ರ ಆ ದೇವರ ಆಭರಣ ಹೊರ ತೆಗೆಯುತ್ತಿದ್ದ ಪೂಜಾರಿ. ಆದರೆ ಆಭರಣ ಪೆಟ್ಟಿಗೆ ಎಲ್ಲಿದೆ ಅಂತ ಯಾರಿಗೂ ಹೇಳದೆ ಪೂಜಾರಿ ಮೃತ ಪಟ್ಟಿದ್ದ. ದೇವರ ಒಡವೆಯ ವಿಚಾರಕ್ಕೆ ಗ್ರಾಮಸ್ಥರು ಹಾಗೂ ಪೂಜರಿಯ ನಡುವೆ ಆಗಾಗ ಜಗಳವೂ ಆಗುತ್ತಿತ್ತು. ಈ ಜಗಳ ಜಾಸ್ತಿಯಾಗುತ್ತಲೇ ಇದ್ದ ಕಾರಣ ಪೂಜಾರಿ ಕುಟುಂಬವೂ ಊರನ್ನ ತೊರೆದಿತ್ತು. ಇದೀಗ ಆ ಆಭರಗಳೆಲ್ಲಾ ಮತ್ತೆ ಸಿಕ್ಕಿವೆ.

ದೇವಸ್ಥಾನವನ್ನು ನಿರ್ಮಾಣ ಮಾಡುವುದಕ್ಕೆ ಗ್ರಾಮಸ್ಥೆರಲ್ಲಾ ತೀರ್ಮಾನ ಮಾಡಿದ್ದರು. ಅದರ ಅಂಗವಾಗಿಯೇ ಬುನಾದಿಯನ್ನು ಅಗೆಯುವುದಕ್ಕೆ ಶುರು ಮಾಡಿದರು. ಆಗ ನೆಲದ ಒಳಗೆ ಪೆಟ್ಟಿಗೆಯೊಂದು ಸದ್ದು ಮಾಡಿದೆ. ಸರಿ ಎಂದು ಆ ಪೆಟ್ಟಿಗೆಯನ್ನ ಹೊರ ತೆಗೆಯುವ ಪ್ರಯತ್ನವನ್ನು ಮಾಡಿದರು. ಇದೊಂದು ಖಾಲಿ ಪೆಟ್ಟಿಗೆ ಎಂದುಕೊಂಡು ಗುಜರಿಗೆ ಹಾಕಲು ಯೋಚನೆ ಮಾಡಿದರು. ಆದರೆ ಒಮ್ಮೆ ಪೆಟ್ಟಿಗೆ ತೆರೆದು ನೋಡುವ ಆಲೋಚನೆ ಮಾಡಿದಾಗ ಅದರಲ್ಲಿ ದೇವರ ಚಿನ್ನಾಭರಣ ಇದ್ದದ್ದು ಬೆಳಕಿಗೆ ಬಂದಿದೆ. ಪತ್ತೆಯಾದ ಲಾಕರ್‌ನಲ್ಲಿ ದೇವರ ಒಡವೆಗಳು, ನಾಗರ ಹೆಡೆ, ರಾಗಿ ಪೂಜಾ ಸಾಮಗ್ರಿಗಳು, ದೇವರ ದೀಪಗಳು, ವಿಗ್ರಹ, ನಾಣ್ಯಗಳು, ಭಕ್ತರು ಅರ್ಪಿಸಿದ ಕಾಣಿಕೆಗಳು ಇವೆ. ಸದ್ಯ ಪಾಲಿಶ್ ಮಾಡಿಸಲು ಗ್ರಾಮಸ್ಥರು ಆಭರಣಗಳನ್ನ ನೀಡಿದ್ದಾರೆ.

