ಚಳ್ಳಕೆರೆ | ಮದುವೆಗೆ ಕುಟುಂಬದವರ ವಿರೋಧ : ಯುವಕ ಆತ್ಮಹತ್ಯೆ

1 Min Read

ಸುದ್ದಿಒನ್, ಚಳ್ಳಕೆರೆ, ಆಗಸ್ಟ್. 24 : ಪೋಷಕರಿಗೂ ಮಕ್ಕಳ ಭವಿಷ್ಯವೇ ಮುಖ್ಯವಾಗಿರುತ್ತದೆ. ಮಕ್ಕಳು ಬೆಳೆದ ಮೇಲೆ ಮದುವೆ ಮಾಡಿಸಿ, ಅವರಿಗೊಂದು ಜೀವನ ಕಲ್ಪಿಸಿಕೊಡುವ ಯೊಇಚನೆಯಲ್ಲಿಯೇ ಇರುತ್ತಾರೆ. ಆದರೆ ಅದಕ್ಕೂ ಮುನ್ನ ಮಕ್ಕಳು ಆರ್ಥಿಕವಾಗಿಯೂ ಬೆಳೆಯಬೇಕು, ಜವಾಬ್ದಾರಿ ಕಲಿತಿರಬೇಕೆಂಬ ಆಸೆ. ಅದೇ ವಯಸ್ಸಲ್ಲಿ ಪ್ರೀತಿ, ಪ್ರೇಮ ಅಂತ ಮಾಡಿದರೆ, ಆ ಮದುವೆಯನ್ನು ಒಪ್ಪುವುದಕ್ಕೆ ಆಗದೆ ಇದ್ದಾಗ ಮಕ್ಕಳಾದರೂ ಅರ್ಥ ಮಾಡಿಕೊಳ್ಳಬೇಕು. ಮಗ ಒಪ್ಪಿದ ಹುಡುಗಿಯನ್ನ ತಂದೆ ತಾಯಿ ಒಪ್ಪದೆ ಇದ್ದ ಕಾರಣಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮದುವೆಗೆ ಕುಟುಂಬದವರು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕ ನೇಣಿಗೆ ಶರಣಾದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ನಗರದ ರಹೀಂನಗರ ಬಡಾವಣೆ ಅಬ್ದುಲ್ ರಹೆಮಾನ್(22) ಆತ್ಮಹತ್ಯೆ ಮಾಡಿಕೊಂಡ ಯುವಕ. ಅಪ್ರಾಪ್ತ ಬಾಲಕಿಯನ್ನು ಪ್ರೇಮಿಸಿ ಮದುವೆಯಾಗಬೇಕೆಂದುಕೊಂಡಿದ್ದ. ಆದರೆ
ಅಪ್ರಾಪ್ತೆ ಜತೆ ಮದುವೆಗೆ ಕುಟುಂಬದವರು ವಿರೋಧಿಸಿದ್ದರು. ಈ ಘಟನೆಯಿಂದ ಮನ ನೊಂದು ರೆಹಮಾನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಈಗಿನ್ನು ಭವಿಷ್ಯದತ್ತ ಗಮನ ಹರಿಸಬೇಕಾದ ವಯಸ್ಸು. ದುಡಿದು ಬದುಕು ಕಟ್ಟಿಕೊಳ್ಳುವ ವಯಸ್ಸು. ಅಪ್ಪ ಅಮ್ಮನಿಗೆ ಆಸರೆಯಾಗಬೇಕಾದ ವಯಸ್ಸು. ಆದರೆ ಪ್ರೀತಿ ಪ್ರೇಮದ ಪಾಶಕ್ಕೆ ಸಿಲುಕಿ ಹುಡುಗ ಭವಿಷ್ಯದ ಬಗ್ಗೆ ಯೋಚನೆಯೇ ಮಾಡದೆ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಮಗನ ಉಜ್ವಲ ಭವಿಷ್ಯದ ಚಿಂತೆ ಮಾಡಿದ್ದ ಪೋಷಕರಿಗೆ ಕಣ್ಣೀರೊಂದೆ ಬರ್ತಿದೆ. ಮಗನ ಸಾವು ಪೋಷಕರನ್ನ ಕಾಡುತ್ತಿದೆ. ಅಪ್ರಾಪ್ತೆಯನ್ನು ಲವ್ ಮಾಡಿದ್ದಕ್ಕೆ ಪ್ರೀತಿಯನ್ನು ತಿರಸ್ಕಾರ ಮಾಡಿದ್ದರು. ಆದರೆ ಪೋಷಕರ ಕಾಳಜಿ ಅರ್ಥ ಮಾಡಿಕೊಳ್ಳದೆ ಆತ್ಮಹತ್ಯೆಗೆ ಶರಣಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *