ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 04 : ಚಲಿಸುತ್ತಿದ್ದ ಕಾರಿನ ಟಯರ್ ಸ್ಪೋಟ ಗೊಂಡ ಕಾರಣ ಕಾರು ಪಲ್ಟಿಯಾಗಿದ್ದು ಕಾರಿನಲ್ಲಿದ್ದ ಓರ್ವ ಮೃತಪಟ್ಟಿದ್ದು ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ನಡೆದಿದೆ.
ಚಳ್ಳಕೆರೆ ತಾಲೂಕಿನ ನಾಗಗೊಂಡನಹಳ್ಳಿ ಸಮೀಪ ಈ ಘಟನೆ ನಡೆದಿದ್ದು. ಕೊಂಡ್ಲಹಳ್ಳಿ ಮಲ್ಲಿಕಾರ್ಜುನ್ ಹಾಗೂ ಮಾರುತಿ ಎನ್ನುವ ಇಬ್ಬರು ಪಗಡಲುಬಂಡೆ ಗ್ರಾಮದಿಂದ ಕೊಂಡ್ಲಹಳ್ಳಿ ಗ್ರಾಮಕ್ಕೆ ಹೋಗುತ್ತಿರುವಾಗ ಚಲಿಸುತ್ತಿದ್ದ ಕಾರಿನ್ ಟೈಯರ್ ಸ್ಫೊಟಗೊಂಡಿದ್ದ ಕಾರು ಪಲ್ಟಿಯಾಗಿದೆ .ಕಾರಿನಲ್ಲಿದ್ದ ಕೊಂಡ್ಲಹಳ್ಳಿ ಮಲ್ಲಿಕಾರ್ಜನ್ (35) ತ್ರೀವ ಗಾಯಗೊಂಡು ಸ್ಥಳದಲ್ಲೆ ಮೃತಪಟ್ಟಿದ್ದು ಮಾರುತಿ ಗೆ ಗಾಯಗಳಾಗಿದ್ದು ಚಳ್ಳಕೆರೆ ಆಸ್ಪತ್ರೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಪರಶುರಾಮಪುರ ಪಿಎಸ್ ಐ ಬಸವರಾಜ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.