ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 14 : ಸಾಕಷ್ಟು ಸಲ, ಹಲವು ಪ್ರಕರಣಗಳಲ್ಲಿ ಪೊಲೀಸ್ ಠಾಣೆಯಲ್ಲಿ ನಿರ್ಲಕ್ಷ್ಯ ತೋರಲಾಗುತ್ತದೆ. ದೂರು ನೀಡಲು ಬಂದಾಗಲೂ ದೂರನ್ನು ದಾಖಲಿಸುವುದಿಲ್ಲ. ಈ ರೀತಿಯ ಸುದ್ದಿಗಳು ಹಲವು ಬಾರಿ ಹೊರ ಬಂದಿವೆ. ಆದರೆ ಮೇಲಾಧಿಕಾರಿಗಳು ಕ್ರಮ ತೆಗೆದುಕೊಂಡಾಗ ಇಂಥ ನಿರ್ಲಕ್ಷ್ಯ ಕಡಿಮೆಯಾಗಬಹುದು. ಇದೀಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನಲ್ಲಿ ಕರ್ತವ್ಯ ಮರೆತ ಎಎಸ್ಐ ಅನ್ನು ಅಮಾನತು ಮಾಡಿ, ಎಸ್ಪಿ ಆದೇಶ ಹೊರಡಿಸಿರುವ ಘಟನೆ ನಡೆದಿದೆ.
ಚಳ್ಳಕೆರೆ ಪೊಲೀಸ್ ಠಾಣೆಯ ಎಎಸ್ಐ ಮುಷ್ಟೂರಪ್ಪ ಅಮಾನತ್ತಾದ ಅಧಿಕಾರಿ. ಕರ್ತವ್ಯಲೋಪ ಹಿನ್ನೆಲೆ ಎಎಸ್ಐ ಮುಷ್ಟೂರಪ್ಪ ಅವರನ್ನು ಅಮಾನತ್ತು ಮಾಡಿ ಚಿತ್ರದುರ್ಗ ಎಸ್.ಪಿ. ಧರ್ಮೇಂದರ್ ಕುಮಾರ್ ಮೀನಾ ಆದೇಶ ಹೊರಡಿಸಿದ್ದಾರೆ.
ಚಳ್ಳಕೆರೆಯ ಪೃಥ್ವಿರಾಜ್ ಎಂಬುವವರು ನಾಪತ್ತೆಯಾಗಿದ್ದರು. ಪೃಥ್ವಿರಾಜ್ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದರು. ದೂರು ಸ್ವೀಕರಿಸದೆ ಎಎಸ್ಐ ನಿರ್ಲಕ್ಷ್ಯ ವಹಿಸಿದ್ದರು. ಈ ಮೂಲಕ ಕರ್ತವ್ಯ ಲೋಪ ಮೆರೆದಿದ್ದಾರೆ. ಹೀಗಾಗಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಈ ನಾಪತ್ತೆಯಾದ ಪೃಥ್ಚಿರಾಜ್ ಎಲ್ಲರಿಗೂ ನೆನಪಿರಬೇಕು. ವಿಡಿಯೋ ಮಾಡಿ ಪೊಲೀಸ್ ಠಾಣೆ ಬಳಿ ಹುಚ್ಚಾಟ ಮಾಡಿದ್ದನು. ಡಿಆರ್ ಡಿಓ, ಐಐಎಸ್ಸಿ, ವಿಧಾನಸೌಧ ಸ್ಪೋಟಿಸುವುದಾಗಿ ವಿಡಿಯೋ ಮಾಡಿದ್ದನು. ಹಾಗೇ ಬಂಧಿಸಿದ ಮೇಲೆ ನಟ ದರ್ಶನ್ ಪಕ್ಕದ ಸೆಲ್ ನಲ್ಲಿಡುವಂತೆ ಹೇಳಿದ್ದನು. ಇಂದು ವಿಧಾನಸೌಧ ಬಳಿ ಬೈಕಿಗೆ ಬೆಂಕಿಯಿಟ್ಟು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದನು. ಪೃಥ್ವಿರಾಜ್ ಚಳ್ಳಕೆರೆ ಪೊಲೀಸರ ನಿರ್ಲಕ್ಷದ ಬಗ್ಗೆ ಈ ಹಿಂದೆ ದೂರು ನೀಡಿದ್ದನು. ಇದೀಗ ಡಿವೈಎಸ್ಪಿ ರಾಜಣ್ಣ ವರದಿ ಆಧರಿಸಿ ಎಎಸ್ಐ ಅಮಾನತ್ತು ಮಾಡಲಾಗಿದೆ.