Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ಚಳ್ಳಕೆರೆ | ವಿದ್ಯುತ್ ಸ್ಪರ್ಶಿಸಿ ಯುವಕ ಸಾವು

---Advertisement---

 

ಚಳ್ಳಕೆರೆ, ನವೆಂಬರ್. 09 : ನೀರು ಕುಡಿಯಲು ಹೋಗಿ ವಿದ್ಯುತ್ ಸ್ಪರ್ಶಸಿ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಘಟನೆ ಶನಿವಾರ ನಡೆದಿದೆ.

ತಾಲ್ಲೂಕಿನ ತಳಕು ಹೋಬಳಿಯ ಕೋಡಿಹಳ್ಳಿ ಗ್ರಾಮದ ನಿಂಗಣ್ಣ, ಶಾಂತಮ್ಮ ಎಂಬುವರ ಮಗ ಲೋಕೇಶ್            (15 ವರ್ಷ) ಮೃತಪಟ್ಟ ವಿದ್ಯಾರ್ಥಿ.  ಶಾಲೆಗೆ ಹೋಗಿ ಬಂದ ಬಳಿಕ ಮನ್ನೆ ಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶ್ರೀ ರಾಘವೇಂದ್ರ ಫೌಲ್ಟ್ರಿ ಕೋಳಿ ಫಾರಂ ಬಳಿ ಇರುವ ನೀರಿನ ಪಂಪ್ ಸೆಟ್ ಬೋರ್ ವೆಲ್ ಹತ್ತಿರ ನೀರು ಕುಡಿಯುವಾಗ ಈ ದುರ್ಘಟನೆ ನಡೆದಿದೆ.

ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸದಂತೆ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಕೋಡಿಹಳ್ಳಿ ಗ್ರಾಮಕ್ಕೆ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಪರಿಹಾರ ಕಲ್ಪಿಸಬೇಕು ಎಂದು ದಲಿತ ಸಾಹಿತ್ಯ ಪರಿಷತ್, ಜಿಲ್ಲಾಧ್ಯಕ್ಷರಾದ ಶಿವಮೂರ್ತಿ. ಟಿ ಕೋಡಿಹಳ್ಳಿ ಮನವಿ ಮಾಡಿದ್ದಾರೆ. ಎಲ್ಲ ಗ್ರಾಮಸ್ಥರು ಹಾಗೂ ಊರಿನ ಮುಖಂಡರು ತುರ್ತಾಗಿ ಪರಿಹಾರ ನೀಡುವಂತೆ ಮೃತರ ಪೋಷಕರು ಆಗ್ರಹಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment