ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಫೆಬ್ರವರಿ. 22 : ಇತ್ತೀಚೆಗಂತು ಎಲ್ಲಿ ನೋಡಿದರೂ ಕಳ್ಳತನದ ಘಟನೆಗಳು ನಡೆಯುತ್ತಲೇ ಇವೆ. ಪೊಲೀಸರು ಕೂಡ ಮಹಿಳೆಯರಿಗೆ ಎಚ್ಚರಿಕೆಯಿಂದ ಇರಲು ಹೇಳುತ್ತಾರೆ. ಆದರೆ ಈ ಕಳ್ಳರು ಸರಿಯಾದ ಸಮಯ ನೋಡಿ ಹೊಂಚು ಹಾಕುತ್ತಾರೆ. ಅಂಥದ್ದೇ ಘಟನೆ ಇದೀಗ ಚಳ್ಳಕೆರೆಯಲ್ಲಿ ನಡೆದಿದೆ.

ಹಾಡ ಹಗಲಿನಲ್ಲಿಯೇ ಈ ದರೋಡೆ ನಡೆದಿದೆ. ನಗರದ ವಾಸವಿ ಕಾಲೋನಿಯಲ್ಲಿ ಉದ್ಯಮಿ ಗೀತ ಲಕ್ಷ್ಮಿ ಎಂಬುವರ ಮನೆಗೆ ದರೋಡೆಕೋರರು ಯಾರಿಗೂ ಅನುಮಾನ ಬಾರದಂತೆ ನುಗ್ಗಿದ್ದಾರೆ. ಪೊಲೀಸರು ಎಂದು ಹೇಳಿ ಇಬ್ಬರು ಮಹಿಳೆಯರು ಇದ್ದ ಮನೆಗೆ ಬಂದ ನಾಲ್ಕು ಜನ ದರೋಡೆಕೋರರು ಒಳಗೆ ಹೋದ ಕೂಡಲೇ ಬಾಗಿಲು ಹಾಕಿ, ಬೆದರಿಸಿದ್ದಾರೆ. ತಕ್ಷಣ ಮನೆಯಲ್ಲಿದ್ದ 300 ಗ್ರಾಂ ಚಿನ್ನಾಭರಣ ದೋಚಿ ಕಾರಿನಲ್ಲಿ ಪರಾರಿಯಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಚಳ್ಳಕೆರೆ ಡಿವೈಎಸ್ಪಿ ರಾಜಣ್ಣ ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿದ್ದಾರೆ. ಅಲ್ಲಿನ ಜಾಗವನ್ನೆಲ್ಲ ಪರಿಶೀಲನೆ ನಡೆಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ದರೋಡೆಕೋರರಿಗಾಗಿ ಈಗಾಗಲೇ ಬಲೆ ಬೀಸಿದ್ದಾರೆ. ಅಕ್ಕಪಕ್ಕದಲ್ಲಿದ್ದ ಸಿಸಿಟಿವಿ ಸೇರಿದಂತೆ ದರೋಡೆಕೋರರನ್ನು ಪತ್ತೆ ಹಚ್ಚುವ ಎಲ್ಲಾ ರೀತಿಯ ತನಿಖೆಯನ್ನು ನಡೆಸುತ್ತಿದ್ದಾರೆ.

