ಚಳ್ಳಕೆರೆ | ವ್ಯಕ್ತಿಯ ಭೀಕರ ಕೊಲೆ

1 Min Read

ವರದಿ : ಸುರೇಶ್ ಬೆಳೆಗೆರೆ, ಮೊ : 84314 13188

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್. 20 : ವ್ಯಕ್ತಿಯೊರ್ವನ ತಲೆ ಮುಖ ಜಜ್ಜಿ ಭೀಕರವಾಗಿ ಹತ್ಯೆ ಮಾಡಿ ರಸ್ತೆಯ ಪಕ್ಕ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ತಾಲೂಕಿನ ಪರಶುರಾಮಪು ಹೋಬಳಿಯ ಎನ್.ಜೆ. ಗೇಟ್ ಬಳಿಯಿರುವ ವೀರಭದ್ರಪ್ಪ ಜಮೀನ ಸಮೀಪ ಈ ಘಟನೆ ನಡೆದಿದೆ. ಭೀಕರವಾಗಿ ಹತ್ಯೆಗೆಡಾದ ವ್ಯಕ್ತಿ ಆಂಧ್ರಪ್ರದೇಶದ ಕಲ್ಯಾಣದುರ್ಗ ತಾಲೂಕಿನ ವಡ್ಡರಪಾಳ್ಯ ಗ್ರಾಮದ ಗೀತ ರಾಜು( 28 )ವರ್ಷ ಎಂದು ತಿಳಿದು ಬಂದಿದೆ.

ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಈ ಭೀಕರ ಹತ್ಯೆ ನಡೆದಿದೆ ಎಂದು ಅನುಮಾನ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪರಶುರಾಮಪುರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ ಪರಶುರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *