ಉದ್ಯಮಿಯೊಬ್ಬರಿಗೆ 7 ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಚೈತ್ರಾ ಕುಂದಾಪುರ ಸದ್ಯಕ್ಕೆ ಸಿಸಿಬಿ ಪೊಲೀಸರ ವಶದಲ್ಲಿದ್ದಾರೆ. ಆದರೆ ಇದ್ದಕ್ಕಿದ್ದ ಹಾಗೇ ಅನಾರೋಗ್ಯ ಕಾಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೂಲಗಳ ಪ್ರಕಾರ ಮೂರ್ಚೆ ಹೋಗಿದ್ದಾರೆ ಎನ್ನಲಾಗಿದೆ.
ಅರೆಸ್ಟ್ ಆದ ಮೇಲೆ ಸರಿಯಾಗಿ ಊಟ, ತಿಂಡಿ ಮಾಡಿಲ್ಲ ಎನ್ನಲಾಗುತ್ತಿದೆ. ಮಾತ್ರೆಯನ್ನು ಸೇವನೆ ಮಾಡಿಲ್ಲದ ಕಾರಣ ಮೂರ್ಚೆ ತಪ್ಪಿದ್ದಾರೆ. ಸದ್ಯ ಅಧಿಕಾರಿಗಳು ಚೈತ್ರಾಳನ್ನು ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿ, ಚಿಕಿತ್ಸೆ ನೀಡುತ್ತಿದ್ದಾರೆ.
ಮಹಿಳಾ ಸಾಂತ್ವಾನ ಕೇಂದ್ರದಿಂದ ಸಿಸಿಬಿ ಕಚೇರಿಗೆ ಬಂದೊಡನೆ ಚೈತ್ರಾ ಪ್ರಜ್ಞೆ ತಪ್ಪಿದ್ದಾಳೆ. ಹತ್ತು ನಿಮಿಷದಲ್ಲಿಯೇ ಈ ರೀತಿ ಘಟನೆ ಸಂಭವಿಸಿದೆ. ಚೈತ್ರಾ ಪ್ರಜ್ಞೆ ತಪ್ಪಿದ ಕೂಡಲೇ ಅವರ ಸಂಬಂಧಿಕರಿಗೆ ಕರೆ ಮಾಡಿ, ಆರೋಗ್ಯದ ಕುರಿತು ವಿಚಾರ ನಡೆಸಿದ್ದಾರೆ. ಆರೋಗ್ಯ ಸಮಸ್ಯೆ ಏನಾದರು ಇತ್ತ ಎಂಬುದರ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಚೈತ್ರಾ ಅರೆಸ್ಟ್ ಆದ ಬೆನ್ನಲ್ಲೇ ಹಲವರ ಹೆಸರು ಕೂಡ ಕೇಳಿ ಬರುತ್ತಿದೆ. ಅದಷ್ಟೇ ಅಲ್ಲ ಚೈತ್ರಾ ಕೂಡ ಜೋರಾಗಿ ಹೇಳಿದ್ದು, ದೊಡ್ಡ ದೊಡ್ಡವರ ಹೆಸರೇ ಬರಲಿದೆ ಎಂದಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಇದರ ತನಿಖೆ ನಡೆಸುತ್ತಿದ್ದಾರೆ. ಯಾರೆಲ್ಲಾ ಚೈತ್ರಾ ಹಿಂದೆ ಇದ್ದು, ಕೆಲಸ ಮಾಡಿಸುತ್ತಿದ್ದಾರೆ ಎಂಬ ಸತ್ಯಾಸತ್ಯತೆ ಇಷ್ಟರಲ್ಲಿಯೇ ಹೊರ ಬರಲಿದೆ.